×
Ad

ಸನ್ಯಾಸ ಧರ್ಮ ಪಾಲಿಸದವರಿಗೆ ಪಟ್ಟದ ದೇವರು ನೀಡಲ್ಲ: ಪೇಜಾವರ ಶ್ರೀ

Update: 2018-07-04 22:00 IST

ಉಡುಪಿ, ಜು.4: ಶಿರೂರು ಮಠಾಧೀಶ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸನ್ಯಾಸ ಧರ್ಮವನ್ನು ಪಾಲಿಸುತ್ತಿಲ್ಲ ಎಂಬುದನ್ನು ಅವರೇ ಬಹಿರಂಗವಾಗಿ ಒಪ್ಪಿ ಕೊಂಡಿದ್ದಾರೆ. ಹೀಗಾಗಿ ಸನ್ಯಾಸಿಯೇ ಅಲ್ಲದವರು ಪಟ್ಟದ ದೇವರಿಗೆ ಪೂಜೆ ಮಾಡುವುದು ಸಂಪ್ರದಾಯವಲ್ಲ. ಆದುದರಿಂದ ಅವರಿಗೆ ಪಟ್ಟದ ದೇವರನ್ನು ನೀಡಿಲ್ಲ ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಕೃಷ್ಣ ಮಠದಲ್ಲಿರುವ ಶಿರೂರು ಮಠದ ಪಟ್ಟದ ದೇವರನ್ನು ಹಸ್ತಾಂತರಿಸದಿರುವ ಕುರಿತ ವರದಿಗೆ ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿರುವ ಸ್ವಾಮೀಜಿ, ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಯತಿ ಧರ್ಮವನ್ನು ಪಾಲಿಸುತ್ತಿದ್ದಾರೆ. ಆದರೆ ಅವರು ವಿದೇಶಕ್ಕೆ ತೆರಳಿರುವುದು ಒಂದೇ ಅವರ ಮೇಲೆ ಇರುವ ಆರೋಪ. ಹೀಗಾಗಿ ಪುತ್ತಿಗೆ ಹಾಗೂ ಶಿರೂರು ಸ್ವಾಮೀಜಿಗಳ ಎರಡು ಪ್ರಕರಣ ಗಳು ಭಿನ್ನ ಎಂದವರು ಸ್ಪಷ್ಟಪಡಿಸಿದ್ದಾರೆ.

ಶಿರೂರು ಸ್ವಾಮೀಜಿಗೆ ಪಟ್ಟದ ದೇವರನ್ನು ನೀಡದಿರುವುದಕ್ಕೆ ಬೇರೆ ಯಾವುದೇ ಕಾರಣಗಳಿಲ್ಲ. ದ್ವಂದ್ವ ಮಠಗಳಾದ ಪುತ್ತಿಗೆ ಮಠಕ್ಕೆ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಶಿರೂರು ಮಠಕ್ಕೆ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಅವರೇ ಶಿಷ್ಯರಿಗೆ ಆಶ್ರಮ ನೀಡಬೇಕು ಎಂಬುದು ನಮ್ಮ ನಿಲುವು ಎಂದು ಪೇಜಾವರ ಸ್ವಾಮೀಜಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News