×
Ad

ಅಕ್ರಮ ಅಡುಗೆ ಅನಿಲ ಪ್ರಕರಣ: ಆರೋಪಿ ದೋಷಮುಕ್ತಿ

Update: 2018-07-04 22:02 IST

ಕುಂದಾಪುರ, ಜು.4: ಸಿದ್ದಾಪುರ ಗ್ರಾಮದ ಕೆಳಪೇಟೆಯ ಮನೆಯಲ್ಲಿ ಅಕ್ರಮವಾಗಿ ಗೃಹ ಬಳಕೆ ಅನಿಲ ಜಾಡಿಗಳು ಹಾಗೂ ಗ್ಯಾಸ್ ರಿಫೀಲಿಂಗ್ ಯಂತ್ರ ವನ್ನು ಇಟ್ಟುಕೊಂಡ ಪ್ರಕರಣದ ಆರೋಪಿ ಹೊಟೇಲ್ ಉದ್ಯಮಿ ಶ್ರೀನಿವಾಸ ಪೈ ಎಂಬವರನ್ನು ಕುಂದಾಪುರ ನ್ಯಾಯಾಲಯ ದೋಷಮುಕ್ತಗೊಳಿಸಿ ಆದೇಶ ನೀಡಿದೆ.

 ಕುಂದಾಪುರ ತಾಲೂಕು ಕಚೇರಿಯ ಆಹಾರ ನಿರೀಕ್ಷಕರಾದ ರಾಮಚಂದ್ರ ಬನ್ನಿಂತ್ತಯ್ಯ ಹಾಗೂ ನರಸಿಂಹ ದಾಳಿ ನಡೆಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪ ಸಾಬೀತಾಗಿಲ್ಲ ಎಂದು ಅಭಿಪ್ರಾಯ ಪಟ್ಟು ಆರೋಪಿಯನ್ನು ಬಿಡು ಗಡೆಗೊಳಿಸಿದೆ. ಆರೋಪಿ ಪರವಾಗಿ ಕುಂದಾಪುರ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News