ಬೈಂದೂರು: ನಾಗರಹಾವು ಕಡಿತಕ್ಕೆ ವೃದ್ಧ ಬಲಿ
Update: 2018-07-04 22:05 IST
ಬೈಂದೂರು, ಜು.4: ಬೈಂದೂರು ಕಲ್ಲಣ್ಕಿ ಎಂಬಲ್ಲಿ ನಾಗರ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ವರದಿ ಯಾಗಿದೆ.
ಮೃತರನ್ನು ಕಲ್ಲಣ್ಕಿ ನಿವಾಸಿ ಸುಬ್ಬಣ್ಣ ಶೆಟ್ಟಿ(77) ಎಂದು ಗುರುತಿಸಲಾಗಿದೆ. ಇವರು ಜು.1ರಂದು ಬೆಳಗಿನ ಜಾವ ಮನೆಯ ಅಂಗಳದಲ್ಲಿ ಕೃಷಿ ಬಗ್ಗೆ ಇಟ್ಟಿದ್ದ ಅಗೆಯನ್ನು ನೋಡಲು ಮನೆಯ ಅಂಗಳಕ್ಕೆ ಬಂದಿದ್ದು, ಬಳಿಕ ಒಳಗೆ ಹೋಗು ತ್ತಿದ್ದಾಗ ಮೆಟ್ಟಿನಲ್ಲಿದ್ದ ನಾಗರ ಹಾವು ಅವರ ಕಾಲಿಗೆ ಕಚ್ಚಿತ್ತೆನ್ನಲಾಗಿದೆ. ಇದರಿಂ ತೀವ್ರವಾಗಿ ಅಸ್ವಸ್ಥಗೊಂಡ ಸುಬ್ಬಣ್ಣ ಶೆಟ್ಟಿ, ಜು.3ರಂದು ಸಂಜೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.