×
Ad

ಜೋಗಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ

Update: 2018-07-04 22:12 IST

ಕೋಟ, ಜು.4: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ನೀಡುವ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಖ್ಯಾತ ಸಾಹಿತಿ, ಪತ್ರಕರ್ತ ಜೋಗಿ ಆಯ್ಕೆಯಾಗಿದ್ದಾರೆ.

ಆ.5ರಂದು ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಮಂಗಳವಾರ ಕೋಟದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಾಡಿನ ಧೀಮಂತ ಪತ್ರಕರ್ತರಾಗಿದ್ದು, ಸುರ್ಧೀಘ ಕಾಲ ‘ಪ್ರಜಾವಾಣಿ’ ಗುಂಪಿನ ಪತ್ರಿಕೆಗಳಲ್ಲಿ ದುಡಿದ ವಡ್ಡರ್ಸೆ ರಘುರಾಮ ಶೆಟ್ಟಿ ಬಳಿಕ ತಾವೇ ಮಂಗಳೂರಿನಲ್ಲಿ ಪ್ರಾರಂಭಿಸಿದ ‘ಮುಂಗಾರು’ ಪತ್ರಿಕೆಯ ಮೂಲಕ ನೂರಾರು ಯುವ ಪತ್ರಕರ್ತರನ್ನು ರೂಪಿಸಿದವರು.

ನಾಡಿನ ಧೀಮಂತ ಪತ್ರಕರ್ತರಾಗಿದ್ದು, ಸುರ್ಧೀಘ ಕಾಲ ‘ಪ್ರಜಾವಾಣಿ’ ಗುಂಪಿನ ಪತ್ರಿಕೆಗಳಲ್ಲಿ ದುಡಿದ ವಡ್ಡರ್ಸೆ ರಘುರಾಮ ಶೆಟ್ಟಿ ಬಳಿಕ ತಾವೇ ಮಂಗಳೂರಿನಲ್ಲಿ ಪ್ರಾರಂಭಿಸಿದ ‘ಮುಂಗಾರು’ ಪತ್ರಿಕೆಯ ಮೂಲಕ ನೂರಾರು ಯುವ ಪತ್ರಕರ್ತರನ್ನು ರೂಪಿಸಿದವರು. ಕಳೆದ ಎರಡು ವರ್ಷಗಳಿಂದ ಬ್ರಹ್ಮಾವರ ಪತ್ರಕರ್ತರ ಸಂಘ ವಡ್ಡರ್ಸೆ ಹೆಸರಿನಲ್ಲಿ ನಾಡಿನ ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸುತಿದ್ದು, ಟಿವಿ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹಾಗೂ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ಬಾರಿ ಪ್ರಶಸ್ತಿಗೆ ಆಯ್ಕೆಯಾಗಿರುವ ‘ಕನ್ನಡಪ್ರಭ’ದ ಜೋಗಿ (ಗಿರೀಶ್ ರಾವ್ ಹತ್ವಾರ್) ಮೂಲತ ದಕ್ಷಿಣ ಕನ್ನಡದ ಪುತ್ತೂರಿನವು. ವಿಭಿನ್ನಶೈಲಿಯ ‘ಜಾನಕಿ’ ಅಂಕಣದಿಂದ ನಾಡಿನ ಗಮನ ಸೆಳೆದಿರುವ ಇವರು, ಕಥೆ, ಕಾದಂಬರಿಗಳ ಮೂಲಕವೂ ಜನಪ್ರಿಯರಾಗಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕ ವಸಂತ್ ಗಿಳಿಯಾರ್ ತಿಳಿಸಿದರು. ಸಂಘದ ಕಾರ್ಯದರ್ಶಿ ರಾಜೇಶ ಗಾಣಿಗ ಅಚ್ಲಾಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News