×
Ad

72 ವರ್ಷದ ತನ್ನ ಪುತ್ರನನ್ನು ಗುಂಡಿಕ್ಕಿ ಕೊಂದ 92 ವರ್ಷದ ವೃದ್ಧೆ!

Update: 2018-07-04 22:36 IST

ಅರಿಝೋನಾ, ಜು.4: ತನ್ನನ್ನು ವೃದ್ಧಾಶ್ರಮಕ್ಕೆ ಕಳುಹಿಸಿಕೊಡುತ್ತಾನೆ ಎಂಬ ಭಯದಿಂದ 92 ವರ್ಷದ ವೃದ್ಧೆಯೊಬ್ಬರು 72 ವರ್ಷದ ಪುತ್ರನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ಪುತ್ರನೊಂದಿಗೆ ಫಿಯೋನಿಕ್ಸ್ ಬಳಿ ವಾಸಿಸುತ್ತಿದ್ದ 92 ವರ್ಷದ ಅನ್ನಾ ಮೇ ಬ್ಲೆಸ್ಸಿಂಗ್ ರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ತನ್ನ ಬಳಿ ಎರಡು ಗನ್ ಇದ್ದುದಾಗಿಯೂ, ಪುತ್ರ ಮಲಗಿದ ನಂತರ ಆತನನ್ನು ಗುಂಡಿಕ್ಕಿ ಕೊಂದಿರುವುದಾಗಿಯೂ ಅನ್ನಾ ಮೇ ತನಿಖಾ ತಂಡದ ಜೊತೆ ಹೇಳಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ ವೃದ್ಧೆಯು ತನ್ನ ಪುತ್ರನ ಪ್ರೇಯಸಿಗೂ ಗುಂಡಿಕ್ಕಲು ಯತ್ನಿಸಿದ್ದಾಳೆ. ಆದರೆ ಆಕೆ ತಪ್ಪಿಸಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.

ತನ್ನನ್ನು ವೃದ್ಧಾಶ್ರಮಕ್ಕೆ ಸೇರಿಸುವುದಾಗಿ ಪುತ್ರ ಹೇಳಿದ್ದ. ಇದರಿಂದ ಆತನನ್ನು ಕೊಲ್ಲದೆ ಬೇರೆ ದಾರಿ ಇರಲಿಲ್ಲ. ಆತನನ್ನು ಕೊಂದ ನಂತರ ತಾನೂ ಆತ್ಮಹತ್ಯೆಗೈಯುವುದಾಗಿ ಯೋಚಿಸಿದ್ದೆ. ಒಂದು ಬಂದೂಕನ್ನು ಖರೀದಿಸಿದ್ದೆ. ಮತ್ತೊಂದನ್ನು ಪತಿ ನೀಡಿದ್ದರು ಎಂದು ವೃದ್ಧೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News