ಚೀನಾ ಭೂಕಂಪ ಸಂಸ್ಥೆಯ ಮುಖ್ಯಸ್ಥನ ಸ್ಪರ್ಧೆಯಲ್ಲಿ ಭಾರತೀಯ

Update: 2018-07-04 17:52 GMT

ಬೀಜಿಂಗ್, ಜು. ೪: ಚೀನಾ ಭೂಕಂಪ ನಿರ್ವಹಣೆ ಸಮಿತಿ (ಸಿಇಎ)ಯ ಮುಖ್ಯಸ್ಥರ ಹುದ್ದೆಗೆ ಭಾರತೀಯ ಭೂಗೋಳ ವಿಜ್ಞಾನಿಯೊಬ್ಬರು ಸ್ಪರ್ಧೆಯಲ್ಲಿದ್ದಾರೆ.

ಪರಮೇಶ್ ಬ್ಯಾನರ್ಜಿ ಆಯ್ಕೆಯಾದರೆ, ಚೀನಾ ಸಚಿವ ಸಂಪುಟ ‘ಸ್ಟೇಟ್ ಕೌನ್ಸಿಲ್’ನ ನೇರ ಉಸ್ತುವಾರಿಯಲ್ಲಿ ಕೆಲಸ ಮಾಡುವ ಸಂಸ್ಥೆಯೊಂದರ ಮುಖ್ಯಸ್ಥರಾಗಿ ಆಯ್ಕೆಯಾಗುವ ಪ್ರಥಮ ಭಾರತೀಯರಾಗಲಿದ್ದಾರೆ.

ಸಿಇಎಯ ಉನ್ನತ ವಿಜ್ಞಾನ ಸಂಸ್ಥೆ ‘ಇನ್‌ಸ್ಟಿಟ್ಯೂಟ್ ಆಫ್ ಜಿಯೋಫಿಸಿಕ್ಸ್’ನ ಮುಖ್ಯಸ್ಥ ಹುದ್ದೆಗೆ ಪರಿಗಣಿಸಲಾದ ನಾಲ್ವರ ಪೈಕಿ ಬ್ಯಾನರ್ಜಿ ಒಬ್ಬರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News