ರಶ್ಯ ಅಧಿಕಾರಿಗಳೊಂದಿಗೆ ಸಿರಿಯ ಪ್ರತಿಪಕ್ಷಗಳ ಮಾತುಕತೆ ಆರಂಭ

Update: 2018-07-04 17:58 GMT

ಅಮ್ಮಾನ್, ಜು. 4: ದಕ್ಷಿಣ ಸಿರಿಯದಲ್ಲಿನ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿ ದೇಶದ ಪ್ರತಿಪಕ್ಷ ಸಂಧಾನಕಾರರು ಮಂಗಳವಾರ ರಶ್ಯ ಅಧಿಕಾರಿಗಳೊಂದಿಗೆ ನೂತನ ಸುತ್ತಿನ ಮಾತುಕತೆಗಳನ್ನು ಆರಂಭಿಸಿದ್ದಾರೆ.

ಈ ಒಪ್ಪಂದದ ಪ್ರಕಾರ, ಬಂಡುಕೋರರು ತಮ್ಮ ಶಸ್ತ್ರಾಸ್ತ್ರಗಳನ್ನು ಸಿರಿಯ ಸೇನೆಗೆ ಹಸ್ತಾಂತರಿಸಬೇಕಾಗಿದೆ ಹಾಗೂ ಬಂಡುಕೋರ ನಿಯಂತ್ರಣದ ಪಟ್ಟಣಗಳಿಗೆ ರಶ್ಯದ ಸೇನಾ ಪೊಲೀಸರ ಪ್ರವೇಶಕ್ಕೆ ಅವಕಾಶ ನೀಡಬೇಕಾಗಿದೆ.

ಕಳೆದ ಎರಡು ವಾರಗಳ ಅವಧಿಯಲ್ಲಿ ರಶ್ಯದ ಯುದ್ಧ ವಿಮಾನಗಳು ಭಾರೀ ಬಾಂಬ್ ದಾಳಿ ನಡೆಸುತ್ತಿರುವಂತೆಯೇ, ಸಿರಿಯದ ಭೂಸೇನೆಯು ದರಾ ಪ್ರಾಂತದಲ್ಲಿರುವ ಬಂಡುಕೋರ ನಿಯಂತ್ರಣದ ಪ್ರದೇಶಗಳಿಗೆ ಪ್ರವೇಶಿಸಿದೆ.

ಶಸ್ತ್ರಾಸ್ತ್ರಗಳ ಹಸ್ತಾಂತರ ಮತ್ತು ಬಂಡುಕೋರರ ಸ್ಥಿತಿಗತಿಗೆ ಸಂಬಂಧಿಸಿ ರಶ್ಯದ ಪ್ರಸ್ತಾಪಗಳಿಗೆ ತಮ್ಮ ಪ್ರತಿಕ್ರಿಯೆಯೊಂದಿಗೆ ಪ್ರತಿಪಕ್ಷ ನಾಯಕರು ಮಾತುಕತೆಯ ಮೇಜಿಗೆ ಮರಳಿದ್ದಾರೆ ಎಂದು ಸಿರಿಯ ಪ್ರತಿಪಕ್ಷ ವಕ್ತಾರ ಇಬ್ರಾಹೀಂ ಅಲ್-ಜಬವಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News