ಬಿಶಾರತುಲ್ ಮದೀನಾ: ನೂತನ ಪದಾಧಿಕಾರಿಗಳ ಆಯ್ಕೆ
ನರಿಂಗಾನ, ಜು. 5: ಅಲ್ ಮದೀನಾ ಸಮೂಹ ಸಂಸ್ಥೆ ಮಂಜನಾಡಿಯ ಕ್ಯಾಂಪಸಿನಲ್ಲಿ ಉನ್ನತ ಶಿಕ್ಷಣಾಭ್ಯಾಸವನ್ನು ನೀಡುವ ಅಲ್ ಮದೀನಾ ದಅ್ವಾ ಕಾಲೇಜ್ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಲಾ ಸಂಘಟನೆ 'ಬಿಶಾರತುಲ್ ಮದೀನಾ 2018-19'ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಮುಹಮ್ಮದ್ ಅನೀಸ್ ಸಹದ್ ಸುರತ್ಕಲ್, ಪ್ರ. ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ವಳಾಲ್, ಕೋಶಾಧಿಕಾರಿಯಾಗಿ ಮುಹಮ್ಮದ್ ನೌಶಾದ್ ಕಲ್ಮಿಂಜೆ, ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಡೈರಕ್ಟರ್ ಮುಹಮ್ಮದ್ ಕುಂಞಿ ಅಮ್ಜದಿ ಅಧ್ಯಕ್ಷತೆಯಲ್ಲಿ, ದಅ್ವಾ ಪ್ರಾಂಶುಪಾಲರಾದ ಅಬ್ದುಸ್ಸಲಾಂ ಅಹ್ಸನಿ ದುಆದೊಂದಿಗೆ ಆರಂಭವಾಗಿ, ಮುದರ್ರಿಸ್ ಅಬ್ದುಲ್ ಅಝೀಝ್ ಅಹ್ಸನಿ ಉದ್ಟಾಟಿಸಿದರು. ಮುದರ್ರಿಸರಾದ ಅಬ್ದುರಹ್ಮಾನ್ ಅಹ್ಸನಿ, ಅಶ್ರಫ್ ಸಖಾಫಿ, ಹಾಫಿಳ್ ಮರ್ಷದ್ ಹುಮೈದಿ ಮತ್ತು ಇಕ್ಬಾಲ್ ಮರ್ಝೂಖಿ ಸಖಾಫಿ ಮಾತನಾಡಿದರು. ಅಲ್ತಾಫ್ ಮರ್ಝೂಖಿ ಸಅದಿ, ಸಯ್ಯಿದ್ ಶಾಹಿಲ್ ಅಲ್ ಹಾದಿ ಬಿಸಿರೋಡ್ ಮತ್ತಿತರು ಉಪಸ್ಥಿತರಿದ್ದರು. ಪದಾಧಿಕಾರಿಗಳನ್ನು ಅಬ್ದುಸ್ಸಲಾಂ ಅಹ್ಸನಿ ಆಯ್ಕೆಮಾಡಿದರು.
ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಇಫಾಝ್ ತಮೀಂ ಸ್ವಾಗತಿಸಿ, ಮಾಜಿ ಪ್ರ. ಕಾರ್ಯದರ್ಶಿ ವಾರ್ಷಿಕ ವರದಿ ಮಂಡಿಸಿ, ಮಾಜಿ ಕೋಶಾಧಿಕಾರಿ ವಾರ್ಷಿಕ ಆಯವ್ಯಯ ವಾಚಿಸಿ, ನೂತನ ಅಧಿಕಾರಿಗಳಿಗೆ ಅಧಿಕಾರವನ್ನು ಹಸ್ತಾಂತರಿಸಿದರು.
ನೂತನ ಜೊತೆ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಮಲಾರ್ ವಂದಿಸಿದರು.