×
Ad

ಬಂಟ್ವಾಳದ ಎಎಸ್ಪಿಯಾಗಿ ಸೋನಾವನೆ ರಿಷಿಕೇಶ್ ಭಗವಾನ್ ಅಧಿಕಾರ ಸ್ವೀಕಾರ

Update: 2018-07-05 17:58 IST

ಬಂಟ್ವಾಳ, ಜು. 5: ಬಂಟ್ವಾಳದ ಎಎಸ್ಪಿ ಆಗಿ ಸೋನಾವನೆ ರಿಷಿಕೇಶ್ ಭಗವಾನ್ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.

ಇಲ್ಲಿನ ಪೊಲೀಸ್ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಂಟ್ವಾಳದ ಡಿವೈಎಸ್ಪಿ ಡಿ. ಕುಮಾರ್ ಅವರಿಂದ ಅಧಿಕಾರ ವಹಿಸಿಕೊಂಡರು.

ಈ ಹಿಂದೆ ಕಾರ್ಕಳದಲ್ಲಿ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದ ರಿಷಿಕೇಶಿ ಅವರು, ಇದೀಗ ಬಂಟ್ವಾಳ ಎಎಸ್ಪಿ ಕಚೇರಿಗೆ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಲು ನಿಯೋಜನೆಯಾಗಿದ್ದಾರೆ. ಈ ಮೊದಲು ಬಂಟ್ವಾಳದಲ್ಲಿ ಅರುಣ್ ಕುಮಾರ್ ಐಪಿಎಸ್ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಸಂದರ್ಭದಲ್ಲಿ ಪ್ರಭಾರ ಡಿವೈಎಸ್ಪಿಯಾಗಿ ಡಿ.ಕುಮಾರ್ ಅವರು ಕರ್ತವ್ಯ ನಿರ್ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News