×
Ad

ಮುಡಿಪು: ಲಾರಿ - ಕಾರು ನಡುವೆ ಅಪಘಾತ; ಮೂವರಿಗೆ ಗಾಯ

Update: 2018-07-05 20:06 IST

ಕೊಣಾಜೆ, ಜು. 5: ಮುಡಿಪು ಸಮೀಪದ ಕಾಯೆರ್ ಗೋಳಿ ಬಳಿ ಲಾರಿ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಸೇರಿ ಮೂವರು ಗಾಯಗೊಂಡ ಘಟನೆ ಗುರುವಾರ ಸಂಜೆ 7 ಗಂಟೆಯ ಸುಮಾರಿಗೆ ನಡೆದಿದೆ.

ಗಾಯಗೊಂಡ ಕಾರು ಚಾಲಕನನ್ನು‌ ಸಿಖಂದರ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರು ಮಕ್ಕಳಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸಿಖಂದರ್ ಅವರಿಗೆ ಗಂಭೀರ ಗಾಯವಾಗಿದ್ದು, ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಮೆಲ್ಕಾರ್ ಕಡೆಯಿಂದ ಮುಡಿಪು ಕಡೆಗೆ ಹೋಗುತಿದ್ದ ವೇಳೆ ಕಾಯೆರ್ ಗೋಳಿ ಬಳಿ ಲಾರಿ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News