×
Ad

ತೊಕ್ಕೊಟ್ಟು: ಕಮರಿಗೆ ಬಿದ್ದ ಕಾರು; ಇಬ್ಬರಿಗೆ ಗಾಯ

Update: 2018-07-05 20:21 IST

ಉಳ್ಳಾಲ, ಜು. 5: ಕೋಟೆಕಾರು ಮಾಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಯ ಹೊಂಡಕ್ಕೆ ಉರುಳಿ ಬಿದ್ದ ಘಟನೆ ಬುಧವಾರ ರಾತ್ರಿ ತೊಕ್ಕೊಟ್ಟುವಿನಲ್ಲಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಬಳ್ಳಾಲ್‌ಬಾಗ್ ನಿವಾಸಿ ವಿನೀಶ ಮತ್ತು ಕಾರು ಚಾಲಕ ಜಾಯಲ್ ಎಂದು ಗುರುತಿಸಲಾಗಿದೆ.

ವಿನೀಶ ಮತ್ತು ಸಹೋಹರ ವಿನೀತ್ ಎಂಬವರು ಕೋಟೆಕಾರ್‌ನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಬೈಕ್ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಕಾರು ಕಮರಿಗೆ ಬಿದ್ದು ನಜ್ಜುಗುಜ್ಜಾಗಿದೆ. ಗಾಯಾಳುಗಳು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News