ಡಿಎನ್‌ಎ ತಂತ್ರಜ್ಞಾನ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ

Update: 2018-07-05 15:28 GMT

ಹೊಸದಿಲ್ಲಿ, ಜೂ. 5: ಅಪರಾಧಗಳ ತನಿಖೆ, ನ್ಯಾಯ ತೀರ್ಮಾನಕ್ಕೆ ಹಾಗೂ ಆಯ್ದ ವ್ಯಕ್ತಿಗಳ ಜೆನೆಟಿಕ್ ಮಾಹಿತಿ ದಾಸ್ತಾನಿಗೆ ಅವಕಾಶ ನೀಡಲು ಡಿಎನ್‌ಎ ಬಳಸುವುದನ್ನು ನಿಯಂತ್ರಿಸುವ ಮಸೂದೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಅಪರಾಧಗಳ ತನಿಖೆ ನಡೆಸಲು, ನಾಪತ್ತೆಯಾದವರ ಗುರುತು ಪತ್ತೆ ಹಚ್ಚಲು , ವ್ಯಕ್ತಿಗಳ ಜೈವಿಕ ಸಂಬಂಧ ನಿರ್ಧರಿಸಲು ಡಿಎನ್‌ಎ ಬಳಕೆಗೆ ಕೋರಿದ ಡಿಎನ್‌ಎ ತಂತ್ರಜ್ಞಾನ (ಬಳಕೆ ಹಾಗೂ ಅನ್ವಯ) ನಿಯಂತ್ರಣ ಮಸೂದೆ-2018ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

 ಡಿಎನ್‌ಎ ಪರೀಕ್ಷೆ ಫಲಿತಾಂಶ ವಿಶ್ವಾಸಾರ್ಹವೆಂದು ಹಾಗೂ ದತ್ತಾಂಶಗಳನ್ನು ದುರ್ಬಳಕೆಯಿಂದ ರಕ್ಷಿಸುವ ಭರವಸೆ ನೀಡಲು ಈ ಮಸೂದೆ ಡಿಎನ್‌ಎ ಪ್ರಯೋಗಾಲಯಕ್ಕೆ ಕಡ್ಡಾಯ ಮಾನ್ಯತೆ ಹಾಗೂ ನಿಯಂತ್ರಣ ಹೇರುತ್ತದೆ ಎಂದು ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಅಪರಾಧ ತನಿಖೆಗಳಲ್ಲಿ ಡಿಎನ್‌ಎ ಬಳಕೆ ವಿಸ್ತರಿಸುವುದರಿಂದ ಶಿಕ್ಷೆಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗಬಹುದು. ಮುಖ್ಯವಾಗಿ ಕೊಲೆ, ಅತ್ಯಾಚಾರ ಹಾಗೂ ಮಾನವ ಸಾಗಾಟದಂತಹ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗುವವರ ಸಂಖ್ಯೆಯಲ್ಲಿ ಏರಿಕೆಯಾಗಬಹುದು ಎಂದು ಮಸೂದೆ ಕರಡು ರೂಪಿಸುವಲ್ಲಿ ನೆರವು ನೀಡಿದ ವಿಜ್ಞಾನಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News