ದೈವಭಕ್ತಿಗಿಂತ ಗುರುಭಕ್ತಿ ಅಳವಡಿಸಿ: ಶಾಸಕ ಭರತ್ ಶೆಟ್ಟಿ

Update: 2018-07-05 15:33 GMT

ಸುರತ್ಕಲ್, ಜು.5: ಗುರು ದೇವರಿಗೆ ಸಮಾನವಾದವರು, ದೈವಭಕ್ತಿಗಿಂತ ಹೆಚ್ಚಾಗಿ ಗುರುಭಕ್ತಿ ಅಳವಡಿಸಿಕೊಳ್ಳಬೇಕಿದೆ. ಒಬ್ಬ ಗುರು ತನ್ನ ವಿದ್ಯಾರ್ಥಿಯಿಂದ ಇದನ್ನು ಬಯಸುತ್ತಾನೆಯೇ ಹೊರತು ಬೇರೆ ಏನನ್ನೂ ಅಲ್ಲ, ನಾವೆಷ್ಟು ಕಲಿತು ಬೆಳೆದರೂ ನಮಗೆ ಕಲಿಸಿದವರು ಮತ್ತೊಬ್ಬರಿಗೆ ಕಲಿಸುತ್ತಾ ಅಲ್ಲೇ ಇರುತ್ತಾರೆ. ಅದರಲ್ಲಿ ಅವರಿಗ್ಯಾವ ನೋವೂ ಇರುವುದಿಲ್ಲ ಎಂದು ಶಾಸಕ ಡಾ.ಭರತ್ ಶೆಟ್ಟಿ ತಿಳಿಸಿದರು.

ಎನ್‌ಐಟಿಕೆ ಕನ್ನಡ ಮಾಧ್ಯಮ ಶಾಲೆಯಿಂದ ಸೇವಾ ನಿವೃತ್ತಿ ಹೊಂದಿದ ಸಂಜೀವ ಬಿ. ಅವರನ್ನು ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಾನೊಬ್ಬ ಉಪನ್ಯಾಸಕನಾಗಿ ಒಬ್ಬ ಶಿಕ್ಷಕನನ್ನು ಗೌರಸಲು ಅತ್ಯಂತ ಹೆಚ್ಚು ಸಂತೋಷ ಪಡುತ್ತೇನೆ. ನಮ್ಮ ಗುರಿ ಇರುವುದು ಒಬ್ಬ ಉತ್ತಮ ವಿದ್ಯಾರ್ಥಿಯನ್ನು ಮತ್ತು ಆತನ ಭವಿಷ್ಯವನ್ನು ರೂಪಿಸುವುದು ಆಗಿದೆ. ಈ ನಿಟ್ಟಿನಲ್ಲಿ ಸಂಜೀವ ಅವರ 38 ವರ್ಷದ ಸೇವೆ ಸಾರ್ಥಕವಾದುದು ಎಂದು ಭರತ್ ಶೆಟ್ಟಿ ಹೇಳಿದರು.

ಶಾಲೆಯ ಹಳೆ ವಿದ್ಯಾರ್ಥಿ ಮತ್ತು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಶಾಸಕ ಮೊದಿನ್ ಬಾವಾ, ಕಾರ್ಪೊರೇಟರ್ ರೇವತಿ ಪುತ್ರನ್, ಶಾಲಾಡಳಿತ ಮಂಡಳಿಯ ಅಧ್ಯಕ್ಷ ಹಾಗು ಎನ್‌ಐಟಿಕೆಯ ನಿರ್ದೆಶಕ ಡಾ.ಕೆ. ಉಮಾಮಹೇಶ್ವರ ರಾವ್, ಸಂಚಾಲಕ ದಿನಕರ್ ಶೆಟ್ಟಿ, ಶಿಕ್ಷಕರಾದ ಪದ್ಮನಾಭ್, ರುದ್ರಮುನಿ ರೆಡ್ಡಿ ಉಪಸ್ಥಿತರಿದ್ದರು. 

ಪದ್ಮನಾಭ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News