ಜು.7: ಸ್ವರಮಂಟಮೆಯಲ್ಲಿ ‘ಅಮ್ಮೆರ್ ಪೊಲೀಸ’ ಕಾರ್ಯಕ್ರಮ

Update: 2018-07-05 15:35 GMT

ಮಂಗಳೂರು, ಜು.5: ಮಂಗಳೂರು ಆಕಾಶವಾಣಿಯ ತುಳು ವಿಭಾಗದ ಸ್ವರಮಂಟಮೆ ಪುಸ್ತಕ-ಧ್ವನಿಸುರುಳಿ ಬಿಡುಗಡೆಯ ನೇರ ಪ್ರಸಾರದ 18ನೇ ಕಾರ್ಯಕ್ರಮ ಜು.7ರಂದು ಬೆಳಗ್ಗೆ 10:30ರಿಂದ 11:30ರವರೆಗೆ ಪ್ರಸಾರವಾಗಲಿದೆ.

ಕಾರ್ಯಕ್ರಮದಲ್ಲಿ ಸಾನ್ವಿ ಕ್ರಿಯೇಷನ್‌ನವರ ‘ಅಮ್ಮೆರ್ ಪೊಲೀಸ’ ಸಿನಿಮಾದ ಹಾಡುಗಳ ಅನಾವರಣ ಹಾಗೂ ಸಿನೆಮಾ ಕುರಿತು ವಿಶೇಷ ಕಾರ್ಯಕ್ರಮ ಬಿತ್ತರವಾಗಲಿದೆ. ಲಕುಮಿ ಕ್ರಿಯೆಷನ್‌ನ ಲಯನ್ ಕಿಶೋರ್ ಡಿ. ಶೆಟ್ಟಿ, ಚಿತ್ರ ನಿರ್ಮಾಪಕ ಸಾನ್ವಿ ಕ್ರಿಯೇಷನ್‌ನ ರಾಜೇಶ್ ಶೆಟ್ಟಿ, ನಿರ್ದೇಶಕ ಸೂರಜ್ ಶೆಟ್ಟಿ, ನಾಯಕ ನಟ ರೂಪೇಶ್ ಶೆಟ್ಟಿ, ನಾಯಕಿ ನಟಿ ಪೂಜಾ ಶೆಟ್ಟಿ, ವಿಸ್ಮಯ ನಾಯಕ, ರೇಮಂಡ್ ಡಿ ಕುನ್ಹ, ಪಲ್ಲವಿ ಪ್ರಶಾಂತ್ ನರಿಕೊಂಬು, ಮಾಲತಿ ಶೆಟ್ಟಿ ಮಾಣೂರು ಭಾಗವಹಿಸಲಿದ್ದಾರೆ.

ಕೇಳುಗರು ಅತಿಥಿ ಕಲಾವಿದರ ಜೊತೆ ಸಿನೆಮಾದ ಬಗ್ಗೆ ಸಂವಾದ ಮಾಡಲು 0824-2211999/ ಮೊ.ಸಂ: 8277038000ನ್ನು ಸಂಪರ್ಕಿಸಬಹುದು ಎಂದು ನಿಲಯದ ಕಾರ್ಯಕ್ರಮ ಮುಖ್ಯಸ್ಥ ಉಷಾಲತಾ ಸರಪಾಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News