×
Ad

ಮಂಗಳೂರು: ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಗೆ ಸನ್ಮಾನ

Update: 2018-07-05 21:23 IST

ಮಂಗಳೂರು, ಜು.5: ಗೋವಾ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಮಾಸ್ಟರ್ ಸಾಹಿಲ್‌ರಾವ್‌ಗೆ ಮಂಗಳೂರು ರೋಟರಿ ಕ್ಲಬ್‌ನಿಂದ ಸನ್ಮಾನಿಸಲಾಯಿತು.

‘ಸಾಹಿಲ್ ಆರು ತಿಂಗಳಲ್ಲಿ ಮಂಕಿ ಮೇಹಮ್ ಫೈಟ್ ಕ್ಲಬ್ ಆ್ಯಂಡ್ ಫಿಟ್‌ನೆಸ್ ಸೆಂಟರ್ ಸೇರಿ ಕ್ಲಬ್‌ನ ಕೋಚ್ ನಿತೇಶ್‌ಕುಮಾರ್ ಅವರಿಂದ ತರಬೇತಿ ಪಡೆದು, ರಾಷ್ಟ್ರಮಟ್ಟದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದಾರೆ’ ಎಂದು ರೋಟರಿ ಜಿಲ್ಲಾ ಫೆಮಿಲಿ ಎಕ್ಸ್‌ಚೇಂಜ್ ಚೇರ್‌ಮನ್ ರಾಜ್‌ಗೋಪಾಲ್ ರೈ ನುಡಿದರು.

ರೋಟರಿ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷ ರೋ.ರೈಮಂಡ್ ಡಿಕುನ್ನಮಾಸ್ಟರ್ ಮಾತನಾಡಿ, ಸಾಹಿಲ್ ನಮ್ಮ ಕ್ಲಬ್‌ನ ಹಿರಿಯ ಸದಸ್ಯ ರೋ. ಡಾ. ನಂದಕಿಶೋರ್ ರಾವ್ ಹಾಗೂ ಡಾ.ಸ್ಮಿತಾ ನಂದಕಿಶೋರ್ ಪುತ್ರರಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಗಳಿಸಿದ್ದು ಕ್ಲಬ್‌ನ ಎಲ್ಲ ಸದಸ್ಯರಿಗೆ ಅತ್ಯಂತ ಸಂತೋಷವಾಗಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾ ಮಾಜಿ ಗವರ್ನರ್ ಡಾ.ದೇವದಾಸ ರೈ, ಕ್ಲಬ್‌ನ ಸದಸ್ಯ ಪ್ರೇಮನಾಥ್, ಕ್ಲಬ್‌ನ ಸ್ಥಾಪಕ ಸದಸ್ಯ ಸತೀಶ್ ಪೈ, ಕ್ಲಬ್‌ನ ಕಾರ್ಯದರ್ಶಿ ಪ್ರಕಾಶ್ ಚಂದ್ರ, ಮುಂದಿನ ಸಾಲಿನ ಅಧ್ಯಕ್ಷರಾಗಿ ಸಂಯೋಜಿತ ಸಂತೋಷ್ ಶೇಟ್ ಮತ್ತಿತರರಿದ್ದರು. ಇಲ್ಯಾಸ ಸಾಂಟಿಸ್ ಸ್ವಾಗತಿಸಿದರು. ಕೆ.ಎಂ. ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ರವಿ ಜಲಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News