×
Ad

ಉಡುಪಿ: ಕ್ರೈಸ್ತ ಮಹಿಳಾ ರಿಕ್ಷಾ ಚಾಲಕಿ ಜಾಸ್ಮಿನ್‌ಗೆ ಸನ್ಮಾನ

Update: 2018-07-05 21:58 IST

 ಉಡುಪಿ, ಜು.5: ಉಡುಪಿಯ ಕರಾವಳಿ ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಪ್ರೇರಣಾ) ಇದರ ವತಿಯಿಂದ, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಆಲ್ವಿನ್ ಕ್ವಾಡ್ರಸ್ ಹಾಗೂ ಉಡುಪಿ ಜಿಲ್ಲೆಯ ಪ್ರಥಮ ಕ್ರೈಸ್ತ ಮಹಿಳಾ ರಿಕ್ಷಾ ಚಾಲಕಿ ಜಾಸ್ಮಿನ್ ಡಿಕೊಸ್ಟಾ ಇವರ ಸನ್ಮಾನ ಕಾರ್ಯಕ್ರಮ ಕಾರ್ಯಕ್ರಮ ಬುಧವಾರ ಉಡುಪಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಪ್ರೇರಣಾ ಉಡುಪಿಯ ಅಧ್ಯಕ್ಷ ಜೇರಿ ವಿನ್ಸೆಂಟ್ ಡಾಯಸ್ ಸನ್ಮಾನಿತರನ್ನು ಸನ್ಮಾನಿಸಿ ಮಾತನಾಡಿ, ಸನ್ಮಾನಿತರಿಬ್ಬರು ಕ್ರೈಸ್ತ ಸಮುದಾಯಕ್ಕೆ ಸ್ಪೂರ್ತಿಯ ವ್ಯಕ್ತಿ ಗಳಾಗಿದ್ದಾರೆ. ಜಾಸ್ಮಿನ್ ಪುರುಷ ಪ್ರಧಾನ ರಿಕ್ಷಾಚಾಲಕರ ಮಧ್ಯೆ ಇಂದು ಪೆರಂಪಳ್ಳಿಯಲ್ಲಿ ತನ್ನ ಸೇವೆ ಮೂಲಕ ಜನಾನುರಾಗಿಯಾಗಿದ್ದಾರೆ ಎಂದು ಪ್ರಶಂಸಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಾರ್ಕಳದ ಸಂತೋಷ್ ಡಿಸಿಲ್ವಾ ಅವರು 15,000ರೂ.ಗಳ ಚೆಕ್‌ನ್ನು ಜಾಸ್ಮಿನ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿ ಡಾಲ್ಫಿ ಲುವಿಸ್, ಖಜಾಂಚಿ ರಾಬರ್ಟ್ ಫುರ್ಟಾಡೊ, ಪ್ರಶಾಂತ್ ಜತನ್ನ, ಟೆರೇನ್ಸ್ ಸುವಾರಿಸ್, ಲೂಯಿಸ್ ಲೋಬೊ, ಡೊನಾಲ್ಡ್ ಸಲ್ಡಾನಾ, ಗ್ರೆಗರಿ ಮಿನೇಜಸ್, ಪ್ರಕಾಶ್ ಪಿಂಟೋ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News