ಉಡುಪಿ: ಚೆಕ್ ಅಮಾನ್ಯದ ಆರೋಪಿಗೆ ಶಿಕ್ಷೆ, ದಂಡ
Update: 2018-07-05 22:53 IST
ಉಡುಪಿ, ಜು.5: ಬ್ರಹ್ಮಾವರ ಹೇರೂರಿನ ಪ್ರದೀಪ್ ಅವರು ತನಗೆ ಹೇರೂರಿನ ಪ್ರಶಾಂತ್ ಪೂಜಾರಿ ಅವರು ನೀಡಿದ ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ದೂರಿನಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ಹೇರೂರಿನ ಪ್ರಶಾಂತ್ ಪೂಜಾರಿ ದೋಷಿ ಎಂದು ಘೋಷಿಸಿ ಅವರಿಗೆ ಒಂದು ವರ್ಷದ ಸಾದಾ ಸಜೆ ಹಾಗೂ 7,05,000 ರೂ. ದಂಡ ವಿಧಿಸಿದೆ.
ದೂರುದಾರರ ಪರವಾಗಿ ನ್ಯಾಯವಾದಿ ರಾಜನ್ ಕುಮಾರ್ ಮಲ್ಪೆ ಹಾಗೂ ಅನಿತಾ ಎಸ್.ಆರ್.ವಾದಿಸಿದ್ದರು.