ಥಾಯ್ಲೆಂಡ್: ದೋಣಿ ಮುಳುಗಿ 20 ಮಂದಿ ನಾಪತ್ತೆ
Update: 2018-07-05 23:21 IST
(ಥಾಯ್ಲೆಂಡ್), ಜು. 5: ಥಾಯ್ಲೆಂಡ್‌ನ ಫುಕೇತ್ ದ್ವೀಪದಲ್ಲಿ ದೋಣಿಯೊಂದು ಮುಳುಗಿದ್ದು, ಸುಮಾರು 20 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಪತ್ತು ನಿರ್ವಹಣೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ದೋಣಿಯಲ್ಲಿ 90 ಪ್ರಯಾಣಿಕರಿದ್ದರು ಹಾಗೂ ಅವರ ಪೈಕಿ ಅರ್ಧದಷ್ಟು ಮಂದಿಯನ್ನು ರಕ್ಷಿಸಲಾಗಿದೆ ಹಾಗೂ ರಕ್ಷಣಾ ಕಾರ್ಯಾಚರಣೆ ಇನ್ನೂ ಸಾಗುತ್ತಿದೆ ಎಂದು ಅವರು ಹೇಳಿದರು.ದೋಣಿಯು ಕೊಹ್ ರಚ ಎಂಬಲ್ಲಿಂದ ಫುಕೇತ್‌ಗೆ ಮರಳುತ್ತಿತ್ತು.