ಕರ್ನಾಟಕ ಬಜೆಟ್: ಕೈಗಾರಿಕಾ ಸ್ನೇಹಿ, ದ.ಕನ್ನಡದ ನಿರ್ಲಕ್ಷ್ಯ; ಸಿಪಿಎಂಟಿಎ
ಮಂಗಳೂರು, ಜು.5: ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಮಂಡಿಸಿರುವ ಬಜೆಟ್ ಕೈಗಾರಿಕಾ ಸ್ನೇಹಿಯಾಗಿದೆ. ಆದರೆ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಪ್ಲಾಸ್ಟಿಕ್ ಕೈಗಾರಿಕೆಗಳ ಸಂಘಟನೆಯ ಅಧ್ಯಕ್ಷ ಬಿ.ಎ. ನಝೀರ್ ಅಭಿಪ್ರಾಯ ಪಟ್ಟಿದ್ದಾರೆ.
ಕೈಗಾರಿಕಾ ಪ್ರಗತಿ ಸಾಧಿಸಲು ಚೀನಾದೊಂದಿಗೆ ಪೈಪೋಟಿ ನಡೆಸುವ ಯೋಜನೆ ಉತ್ತಮವಾಗಿದೆ. ಸೋಲಾರ್, ಮೊಬೈಲ್ ಬಿಡಿಭಾಗಗಳು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕಾ ಘಟಕಗಳನ್ನು ತೆರೆಯಲು ಈಗಾಗಲೇ ಎಂಟು ಜಿಲ್ಲೆಗಳನ್ನು ಆರಿಸಲಾಗಿದೆ. ಇದು ಶ್ಲಾಘನೀಯ. ಆದರೆ ಬಜೆಟ್‌ನಲ್ಲಿ ಕರ್ನಾಟಕದ ಕರಾವಳಿ ಭಾಗಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಕಾರ್ಮಿಕ, ಕಾರ್ಖಾನೆ, ಪರಿಸರ ಮತ್ತು ತೆರಿಗೆ ಜಾರಿ ಇಲಾಖೆಗಳು ಪರಿಶೀಲನೆ ನಡೆಸಲು ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿ ಮಾಡಿರುವುದರಿಂದ ಕೈಗಾರಿಕೆಗಳನ್ನು ನಡೆಸುವುದು ಸುಲಭವಾಗಲಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.