ತೈಲ ಬೆಲೆ ಶೀಘ್ರವೇ 100 ಡಾಲರ್: ಇರಾನ್ ಎಚ್ಚರಿಕೆ

Update: 2018-07-06 18:25 GMT

ಟೆಹರಾನ್, ಜು. 6: ತೈಲ ಪೂರೈಕೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಡೆಯೊಡ್ಡುತ್ತಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಶೀಘ್ರವೇ ಬ್ಯಾರಲ್‌ಗೆ 100 ಡಾಲರ್ ಆಗುತ್ತದೆ ಎಂದು ಇರಾನ್‌ನ ‘ಒಪೆಕ್’ ಗವರ್ನರ್ ಗುರುವಾರ ಹೇಳಿದ್ದಾರೆ.

ಬೆಲೆ ಕಡಿಮೆ ಮಾಡಲು ಸೌದಿ ಅರೇಬಿಯ ಮತ್ತು ರಶ್ಯಗಳು ನಡೆಸುವ ಕಸರತ್ತುಗಳಿಂದ ಏನೂ ಪ್ರಯೋಜನವಿಲ್ಲ ಎಂದು ‘ರಾಯ್ಟರ್ಸ್’ನೊಂದಿಗೆ ಮಾತನಾಡಿದ ಅವರು ಹೇಳಿದರು.

‘ಒಪೆಕ್’ನ ಮೂರನೇ ಅತಿ ದೊಡ್ಡ ತೈಲ ಉತ್ಪಾದಕ ದೇಶವಾಗಿರುವ ಇರಾನ್ ಅಮೆರಿಕದಿಂದ ಆರ್ಥಿಕ ದಿಗ್ಬಂಧನಗಳನ್ನು ಎದುರಿಸುತ್ತಿದೆ. ಇರಾನ್‌ನ ತೈಲವನ್ನು ಖರೀದಿಸಬಾರದೆಂದು ಅಮೆರಿಕ ಜಗತ್ತಿನ ದೇಶಗಳಿಗೆ ತಾಕೀತು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News