×
Ad

ಮಂಗಳೂರು ವಿವಿ ಸಂಧ್ಯಾ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸುಗಳಿಗೆ ಅರ್ಜಿ ಆಹ್ವಾನ

Update: 2018-07-07 22:18 IST

ಮಂಗಳೂರು, ಜು.7: ಮಂಗಳೂರು ವಿವಿಯ ಸಂಧ್ಯಾ ಕಾಲೇಜಿನಲ್ಲಿ 2018-19 ನೇ ಸಾಲಿನ ಎಂ.ಎ. ಕೊಂಕಣಿ/ತುಳು/ಇಂಗ್ಲಿಷ್/ಎಂಬಿಎ(ಐಬಿ)/ಎಂಕಾಂ ತರಗತಿಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 2 ವರ್ಷಗಳ ಅವಧಿಯ ಈ ಕೋರ್ಸ್‌ಗಳು ಸಂಜೆ 5ರಿಂದ ರಾತ್ರಿ 9ರವರೆಗೆ ನಡೆಯಲಿದೆ.

ಕೊಂಕಣಿ ಮತ್ತು ತುಳು ಅಭ್ಯಸಿಸಲು ಇಚ್ಛಿಸುವ ಅಭ್ಯರ್ಥಿಗಳು ಶೇ.45 ಅಂಕಗಳೊಂದಿಗೆ ಯಾವುದೇ ಪದವಿ ಪಡೆದಿರಬೇಕು. ಕೊಂಕಣಿ/ತುಳು ಮಾತೃಭಾಷಿಕರು, ಕೊಂಕಣಿ/ತುಳು ಮಾತನಾಡಲು - ಓದಲು-ಬರೆಯಲು ಬಲ್ಲವರು ಪ್ರವೇಶ ಪರೀಕ್ಷೆಯ ಮುಖಾಂತರ ಕೊಂಕಣಿ/ತುಳು ಕೋರ್ಸಿಗೆ ಪ್ರವೇಶಾತಿಯನ್ನು ಪಡೆಯಬಹುದು. ಎಸ್ಸಿ/ಎಸ್ಟಿ/ಪ್ರವರ್ಗ 1ರ ವಿದ್ಯಾರ್ಥಿಗಳು ಶೇ.40ಅಂಕ ಪಡೆದಿರಬೇಕು. ಪದವಿಯಲ್ಲಿ ಪ್ರಥಮ/ದ್ವಿತೀಯ ಭಾಷೆಯಾಗಿ ಕೊಂಕಣಿ ಭಾಷೆಯನ್ನು ಅಭ್ಯಸಿಸಿದವರು ಶೇ.60 ಅಂಕ ಹೊಂದಿರಬೇಕು.

ಕೊಂಕಣಿ ಸ್ನಾತಕೋತ್ತರ ಪದವಿಗೆ ಭಾಷಾಶಾಸ್ತ್ರ, ಭಾಷಾ ಇತಿಹಾಸ, ವ್ಯಾಕರಣ, ಕಥೆ, ಕತೆ, ವಿಮರ್ಶೆ, ನಾಟಕ, ಸಂಸ್ಕೃತಿ, ಜನಪದ, ಕಾವ್ಯಶಾಸ್ತ್ರ, ಭಾಷಿಕ ವೈವಿಧ್ಯತೆ, ಸಂಘಟನೆ, ಭಾಷಾಂತರ, ಕಾದಂಬರಿ, ವ್ಯಾವಹಾರಿಕ ಕೊಂಕಣಿ ಮುಂತಾಗಿ ಅಭ್ಯಾಸ ಪತ್ರಿಕೆಗಳಿವೆ. ಎಲ್ಲಾ ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಜು.16 ಕೊನೆಯ ದಿನವಾಗಿದೆ. ಹೆಚ್ಚಿನ ಮಾತಿಗೆ ಮಂಗಳೂರು ವಿವಿ ಸಂಧ್ಯಾ ಕಾಲೇಜಿನ ಕಚೇರಿ ದೂ.ಸಂ: 0824-2424608ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News