ದೇವರ ಅಸ್ತಿತ್ವ ಸಾಬೀತು ಪಡಿಸಿದರೆ ರಾಜೀನಾಮೆ ನೀಡುತ್ತಾರಂತೆ ಈ ದೇಶದ ಅಧ್ಯಕ್ಷ!

Update: 2018-07-07 17:42 GMT

ಮನಿಲಾ (ಫಿಲಿಪ್ಪೀನ್ಸ್), ಜು. 7: ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಇತ್ತೀಚೆಗೆ ದೇವರನ್ನು ಮೂರ್ಖ ಎಂದು ಕರೆಯುವ ಮೂಲಕ ತನ್ನ ಬಹುಸಂಖ್ಯಾತ ರೋಮನ್ ಕ್ಯಾಥೊಲಿಕ್ ದೇಶದಲ್ಲಿ ವಿವಾದದ ಕಿಡಿ ಹಾರಿಸಿದ್ದರು.

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅವರು, ದೇವರು ಇದ್ದಾರೆ ಎಂಬುದನ್ನು ಯಾರಾದರು ಸಾಬೀತುಪಡಿಸಿದರೆ ತಾನು ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದ್ದಾರೆ.

‘‘ಮೊದಲ ಪಾಪದ ಕಲ್ಪನೆ ಸೇರಿದಂತೆ, ಕ್ರೈಸ್ತ ಧರ್ಮದ ಕೆಲವು ಮೂಲ ತತ್ವಗಳು ಅಮಾಯಕ ಶಿಶುಗಳನ್ನೂ ಬಾಧಿಸುತ್ತವೆ. ಅವುಗಳನ್ನು ಬ್ಯಾಪ್ಟಿಸಮ್ ಮೂಲಕ ಮಾತ್ರ ಹೋಗಲಾಡಿಸಬಹುದಾಗಿದೆ. ಇಲ್ಲಿ ದೇವರ ತರ್ಕ ಎಲ್ಲಿದೆ?’’ ಎಂದು ಶುಕ್ರವಾರ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News