×
Ad

ಸಿಇಟಿ, ನೀಟ್: ತರಬೇತಿ ಶಿಬಿರ

Update: 2018-07-08 00:04 IST

ಮಂಗಳೂರು, ಜು.7: ಸಿಇಟಿ, ನೀಟ್ ಪ್ರವೇಶ ಪರೀಕ್ಷೆ ಬರೆದು ವೈದ್ಯಕೀಯ, ದಂತವೈದ್ಯಕೀಯ, ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ-ನ್ಯಾಚುರಾಪಥಿ, ಫಾರ್ಮಸಿ, ಇಂಜಿನಿಯರಿಂಗ್, ಫಾರ್ಮ್ ಸೈನ್ಸ್‌ನ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ದಾಖಲೆಗಳ ಪರಿಶೀಲನೆ ಬಹುತೇಕ ಮುಗಿದಿದ್ದು, ಮೆಡಿಕಲ್, ಡೆಂಟಲ್ ಕೋರ್ಸ್‌ಗಳಿಗೆ ಮೊದಲ ಸುತ್ತಿನ ಇಚ್ಛೆ ನಮೂದಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ಈ ಹಿನ್ನೆಲೆ ನಗರದ ಕರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್ಮೆಶನ್ ಸೆಂಟರ್ ಸಂಸ್ಥೆಯು ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಇಚ್ಛೆ ನಮೂದಿಸುವ (ಆಫ್ಶನ್ ಎಂಟ್ರಿ) ಕುರಿತಂತೆ ಪ್ರಾಯೋಗಿಕ ತರಬೇತಿ ಶಿಬಿರ ಹಮ್ಮಿಕೊಂಡಿದೆ.

ನಗರದ ಸ್ಟೇಟ್‌ಬ್ಯಾಂಕ್ ಬಳಿಯ ನೆಲ್ಲಿಕಾಯಿ ರಸ್ತೆಯ ಅಲ್‌ರಹಬಾ ಪ್ಲಾಝಾದ ಎರಡನೇ ಮಹಡಿಯಲ್ಲಿರುವ ದಿ ಕ್ಯಾಂಪಸ್ ಕರಿಯರ್ ಅಕಾಡಮಿಯ ಸಭಾಂಗಣದಲ್ಲಿ ಜು.9ರಂದು ಬೆಳಗ್ಗೆ 10ಕ್ಕೆ ಈ ಶಿಬಿರ ನಡೆಯಲಿದೆ.

ಪ್ರವೇಶ ಉಚಿತವಾಗಿದ್ದು, ಆಸಕ್ತರು 9845054191ಗೆ ಸಂಪರ್ಕಿಸಿ, ಹೆಸರು ನೋಂದಾಯಿಸಬಹುದಾಗಿದೆ ಎಂದು ಕರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್ಮೆಶನ್ ಸೆಂಟರ್‌ನ ಸ್ಥಾಪಕಾಧ್ಯಕ್ಷ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News