ಜು.10: ಕೃಷ್ಣಾಪುರದಲ್ಲಿ ಹಜ್ ತರಬೇತಿ ಶಿಬಿರ
Update: 2018-07-08 17:26 IST
ಮಂಗಳೂರು, ಜು. 8: ಅಲ್ -ಮದ್ರಸತುಲ್ ಬದ್ರಿಯಾ ಕೇಂದ್ರ ಮದ್ರಸ ಸಮಿತಿ 7ನೆ ಬ್ಲಾಕ್ ಕೃಷ್ಣಾಪುರ ಇದರ ವತಿಯಿಂದ ಜು. 10ರಂದು ಬದ್ರಿಯಾ ಜುಮಾ ಮಸ್ಜಿದ್ 7ನೆ ಬ್ಲಾಕ್ ಕೃಷ್ಣಾಪುರ ದಲ್ಲಿ ಹಜ್ ತರಬೇತಿ ಶಿಬಿರ ನಡೆಯಲಿದೆ.
ಕೃಷ್ಣಾಪುರ ಮುಸ್ಲಿಂ ಜಮಾಅತ್ ಖಾಝಿ ಇ.ಕೆ. ಇಬ್ರಾಹೀಂ ಮುಸ್ಲಿಯಾರ್ ದುವಾ ನೆರವೇರಿಸಲಿದ್ದಾರೆ. 7ನೆ ಬ್ಲಾಕ್ ಕೃಷ್ಣಾಪುರದ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮಸೀದಿಯ ಖತೀಬ್ ಪಿ.ಎಂ.ಉಮ್ಮರುಲ್ ಫಾರೂಕ್ ಸಖಾಫಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್‌ನ ಪ್ರಧಾನ ಕಾರ್ಯದರ್ಶಿ ಅಬೂಸುಫ್‌ಯಾನ್ ಎಚ್.ಐ.ಇಬ್ರಾಹಿಂ ಮದನಿ ತರಬೇತಿ ನೀಡಲಿದ್ದಾರೆ ಎಂದು ಅಲ್ -ಮದ್ರಸತುಲ್ ಬದ್ರಿಯಾ ಕೇಂದ್ರ ಮದ್ರಸ ಸಮಿತಿ 7ನೆ ಬ್ಲಾಕ್ ಕೃಷ್ಣಾಪುರ ಇದರ ಅಧ್ಯಕ್ಷ ಉಮ್ಮರ್ ಫಾರೂಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.