ವಸತಿ ಸಮೀಕ್ಷೆ: ವರದಿ ಸಲ್ಲಿಸಲು ಅವಧಿ ವಿಸ್ತರಣೆ
ಉಡುಪಿ, ಜು.8: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 2011ರ ಸಾಮಾಜಿಕ, ಆರ್ಥಿಕ, ಜಾತಿ ಗಣತಿ ಸಮೀಕ್ಷೆ ಪಟ್ಟಿಯಲ್ಲಿರುವ ಫಲಾನು ಭವಿಗಳಿಗೆ ಮಾತ್ರ ವಸತಿ ಸೌಕರ್ಯ ನೀಡಲಾಗುತ್ತಿದ್ದು, ಈ ಸಮೀಕ್ಷೆ ಸಂದರ್ಭ ಅರ್ಹರನ್ನು ಕೈಬಿಟ್ಟಿರುವುದರಿಂದ ಫಲಾನುಭವಿಗಳನ್ನು ಸೇರ್ಪಡೆ ಗೊಳಿಸಲು ಅವಕಾಶ ಕೋರಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಕೇಂದ್ರ ಸರಕಾರ ವಸತಿ ರಹಿತರ/ನಿವೇಶನ ರಹಿತರ ಸಮೀಕ್ಷೆ ನಡೆಸಿ ಶಾಶ್ವತ ಪಟ್ಟಿಗೆ ಅರ್ಹ ಫಲಾ ನುಭವಿಗಳ ಹೆಸರು ಸೇರ್ಪಡೆಗೊಳಿಸಲು ಅನುಮತಿ ನೀಡಿದೆ. ಈಗಾಗಲೇ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ವರದಿ ಸಲ್ಲಿಸಲು ಜು.31ರ ವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ.
ಇನ್ನು ಮುಂದೆ ಈ ಪಟ್ಟಿಯಲ್ಲಿರುವ ಫಲಾನುಭವಿಗಳನ್ನು ಮಾತ್ರ ರಾಜ್ಯ ಹಾಗೂ ಕೇಂದ್ರ ಪುರಸ್ಕೃತ ವಸತಿ ಯೋಜನೆಗಳ ಆಯ್ಕೆಗೆ ಅವಕಾಶ ಇರುವುದ ರಿಂದ ಅರ್ಹ ವಸತಿ ರಹಿತ ಮತ್ತು ನಿವೇಶನ ರಹಿತ ಫಲಾನುಭವಿಗಳು ತಮ್ಮ ವ್ಯಾಪ್ತಿಯ ಗ್ರಾಪಂಗೆ ಭೇಟಿ ನೀಡಿ, ಸೂಕ್ತ ದಾಖಲೆ ನೀಡಿ ಹೆಸರನ್ನು ಸೇರ್ಪಡೆ ಗೊಳಿಸುವಂತೆ ಉಡುಪಿ ಜಿಪಂ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.