ಜು.10ರಂದು ಮಾದಕ ವ್ಯಸನ, ಕಳ್ಳಸಾಗಣೆ ನಿಷೇಧಿತ ದಿನಾಚರಣೆ
Update: 2018-07-08 17:43 IST
ಉಡುಪಿ, ಜು.8: ಉಡುಪಿ ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಂತೆಕಟ್ಟೆ ಧನ್ವಂತರಿ ಸ್ಕೂಲ್ ಮತ್ತು ಕಾಲೇಜು ಆಫ್ ನರ್ಸಿಂಗ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ನಿಷೇಧಿತ ದಿನಾಚರಣೆ ಯನ್ನು ಜು.10ರಂದು ಬೆಳಗ್ಗೆ 10ಗಂಟೆಗೆ ಧನ್ವಂತರಿ ಸ್ಕೂಲ್‌ನಲ್ಲಿ ಆಯೋಜಿಸ ಲಾಗಿದೆ.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಉಡುಪಿ ಶಾಸಕ ರಘುಪತಿ ಭಟ್ ವಹಿಸ ಲಿರುವರು ಎಂದು ಪ್ರಕಟಣೆ ತಿಳಿಸಿದೆ.