ಕೋಡಿ: ವನಮಹೊತ್ಸವ ಆಚರಣೆ
Update: 2018-07-08 18:02 IST
ಕುಂದಾಪುರ, ಜು.8: ಕುಂದಾಪುರ ಕನ್ನಡಾಭಿಮಾನ ಡಾ.ರಾಜ್ ಕುಮಾರ್ ಸಂಘಟನೆ ವತಿಯಿಂದ ಕೋಡಿಯ ಡಾ.ರಾಜ್ ಕುಮಾರ್ ಪಾರ್ಕಿನಲ್ಲಿ ವಿವಿಧ ಜಾತಿಯ ಸಸ್ಯಗಳ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಸಂಘಟನೆಯ ಅಧ್ಯಕ್ಷ ರತ್ನಾಕರ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದರು. ಸಂಘಟನೆಯ ಸುನಿಲ್ ಖಾರ್ವಿ, ಸಚಿನ್ ಖಾರ್ವಿ, ಡುಂಢಿರಾಜ್, ಗಣೇಶ, ರಾಘವೇಂದ್ರ, ರಾಮಚಂದ್ರ ಪೂಜಾರಿ, ಕಿಶನ್ ಖಾರ್ವಿ, ಸಂದೇಶ್ ಬಂಗೇರ, ರಘು ಪೂಜಾರಿ, ವಿಜಯ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.