×
Ad

ಕಾರ್ಕಳ: ಅಯ್ಯಪ್ಪನಗರದಲ್ಲಿ ಮಹಿಳೆಯ ಕೊಲೆ

Update: 2018-07-08 18:29 IST

ಕಾರ್ಕಳ, ಜು. 8: ಕುಕ್ಕುಂದೂರ್ ಗ್ರಾಮದ ಅಯ್ಯಪ್ಪನಗರ ನಿವಾಸಿ ಫ್ಲೊರಿನ್ ಡಿಸೋಜ (54) ಎಂಬವರು ತನ್ನ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಫ್ಲೊರಿನ್ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಅವರ ಪತಿ ಆ್ಯಟೋನಿ ಡಿಸೋಜ ಮಾಲಾ ಗ್ರಾಮದ ಹುಕ್ರಟ್ಟೆ ನಿವಾಸಿಯಾಗಿದ್ದು, ಪತಿ-ಪತ್ನಿಯ ಮಧ್ಯೆ ಮನಸ್ತಾಪ ಇತ್ತು ಎನ್ನಲಾಗಿದ್ದು, ಬೇರೆ ಬೇರೆಯಾಗಿ ವಾಸವಾಗಿದ್ದು, ಓರ್ವ ಪುತ್ರ ಫ್ಲೊರಿನ್ ಅವರೊಂದಿಗೆ ಇದ್ದು, ಶಾಲೆಗೆ ರಜೆ ಇದ್ದುದರಿಂದ ಶನಿವಾರ ತಂದೆಯ ಮನೆಗೆ ಹೋಗಿದ್ದು, ಈ ಸಂದರ್ಭ ಫ್ಲೊರಿನ್ ಏಕಾಂಗಿಯಾಗಿದ್ದರು. ರಾತ್ರಿ ಯಾರೂ ಇಲ್ಲದ ಸಂದರ್ಭ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News