×
Ad

ರೈತರ ಸಾವುಗಳು ಹಳೆಯ ಸಮಸ್ಯೆ: ಕೇಂದ್ರ ಸಚಿವ ಸುರೇಶ್ ಪ್ರಭು

Update: 2018-07-08 20:52 IST

ಕೋಲ್ಕತಾ,ಜು.8: ರೈತರ ಸಾವುಗಳು ಹಳೆಯ ಸಮಸ್ಯೆಯಾಗಿದೆ ಮತ್ತು ಅವರ ಸಂಕಷ್ಟಗಳನ್ನು ನಿವಾರಿಸಲು ನರೇಂದ್ರ ಮೋದಿ ಸರಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ನಾಗರಿಕ ವಾಯುಯಾನ ಸಚಿವ ಸುರೇಶ್ ಪ್ರಭು ಅವರು ರವಿವಾರ ಇಲ್ಲಿ ಹೇಳಿದರು.

ಪ.ಬಂಗಾಳ ಬಿಜೆಪಿ ಮುಖ್ಯಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು,ರೈತರ ಬೆಳೆಗಳಿಗ ಕನಿಷ್ಠ ಬೆಂಬಲ ಬೆಲೆ ಏರಿಕೆ, ಕೃಷಿ ಸಾಲಗಳ ಮನ್ನಾ ಮತ್ತು ಬೆಳೆ ವಿಮೆ ಯೋಜನೆ ಸೇರಿದಂತೆ ಹಲವಾರು ಕೃಷಿಕ ಸ್ನೇಹಿ ಕ್ರಮಗಳನ್ನು ಸರಕಾರವು ತೆಗೆದುಕೊಂಡಿದೆ ಎಂದರು.

ರೈತರ ಸಾವುಗಳು ಸಂಭವಿಸುತ್ತಿವೆ,ನಿಜ. ಆದರೆ ಅದು ವರ್ಷಗಳಿಂದಲೂ ಇರುವ ಹಳೆಯ ಸಮಸ್ಯೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಮೋದಿಯವರು ತನ್ನ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ರೈತರಿಗಾಗಿ ಬಹಳಷ್ಟು ಕೆಲಸಗಳನ್ನು ಮಾಡಿದ್ದು, ಕಳೆದ 70 ವರ್ಷಗಳಲ್ಲೂ ರೈತರ ಬಗ್ಗೆ ಇಷ್ಟು ಕಾಳಜಿಯನ್ನು ವಹಿಸಲಾಗಿರಲಿಲ್ಲ ಎಂದ ಪ್ರಭು, ಬರ ಅಥವಾ ಪ್ರವಾಹಗಳಿಂದಾಗಿ ಬೆಳೆ ವೈಫಲ್ಯಗಳು ದೇಶದ ಕೆಲವು ಭಾಗಗಳಲ್ಲಿ ರೈತರ ಆತ್ಮಹತ್ಯೆಗಳಿಗೆ ಕಾರಣವಾಗಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News