×
Ad

ಕಾಪು: ನೆರೆಪೀಡಿತ ಪ್ರದೇಶದಲ್ಲಿ ಪಾರ್ಥಿವ ಶರೀರವನ್ನು ತೇಲಿಸಿಕೊಂಡು ತಂದರು !

Update: 2018-07-08 21:46 IST

ಕಾಪು, ಜು.8: ನೆರೆ ಪೀಡಿತ ಕಟಪಾಡಿ ಮೂಡಬೆಟ್ಟು ಗ್ರಾಮದ ಕಂಬಳ ಕಟ್ಟೆ ಎಂಬಲ್ಲಿ ವೃದ್ಧೆಯೊಬ್ಬರ ಪಾರ್ಥಿವ ಶರೀರವನ್ನು ಅಂತ್ಯ ಸಂಸ್ಕಾರಕ್ಕಾಗಿ ನೀರಿ ನಲ್ಲೇ ತೇಲಿಸಿಕೊಂಡು ತಂದ ಘಟನೆ ರವಿವಾರ ನಡೆದಿದೆ.

ಕಂಬಳಕಟ್ಟೆಯ ಬೀಡುಬದಿಯ ಸೇಸಿ ಪೂಜಾರ್ತಿ (98) ಎಂಬವರು ಇಂದು ಬೆಳಗ್ಗೆ ನಿಧನರಾಗಿದ್ದು, ಅವರ ಅಂತ್ಯ ಸಂಸ್ಕಾರವನ್ನು ಕಟಪಾಡಿ ಪಳ್ಳಿಗುಡ್ಡೆಯ ರುದ್ರಭೂಮಿಯಲ್ಲಿ ನಡೆಸಬೇಕಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದ ಕಂಬಳಕಟ್ಟೆಯ ಪರಿಸರ ಜಲಾವೃತಗೊಂಡಿರು ವುದರಿಂದ ಮೃತರ ಪಾರ್ಥಿವ ಶರೀರವನ್ನು ಹೊತ್ತುಕೊಂಡು ತರಲು ಸಾಧ್ಯ ವಾಗಲಿಲ್ಲ.

ಅದಕ್ಕಾಗಿ ಮನೆಯವರು ಪಾರ್ಥಿವ ಶರೀರ ಇರಿಸಿದ ಸ್ಟ್ರಕ್ಚರ್‌ಗೆ ವಾಹನದ ಟಯರ್ ಟ್ಯೂಬ್ ಬಳಸಿ ಮನೆಯಿಂದ ಸುಮಾರು 500 ಮೀಟರ್ ದೂರದ ರಸ್ತೆಯವರೆಗೆ ತೇಲಿಸಿಕೊಂಡು ತರಲಾಯಿತು. ಈ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಕಾರಣ ವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News