×
Ad

ಕಡಬ: ಮಿದುಳು ರಕ್ತಸ್ರಾವದಿಂದ ಗ್ರಾಮ ಲೆಕ್ಕಾಧಿಕಾರಿ ನಿಧನ

Update: 2018-07-08 21:52 IST

ಕಡಬ, ಜು. 8. ಕೊಂಬಾರು ಗ್ರಾಮ ಲೆಕ್ಕಾಧಿಕಾರಿ ಸೇವೆಯಲ್ಲಿದ್ದ ನೆಬಿ ಸಾಬ್ ಮಿದುಳು ರಕ್ತಸ್ರಾವದಿಂದಾಗಿ ರವಿವಾರ ನಿಧನರಾದರು.

ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ಹಿರೇ ಉಪನಾಳ ನಿವಾಸಿಯಾಗಿದ್ದ ನಬಿ ಸಾಬ್ ನಿವೃತ್ತ ಯೋಧರಾಗಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಕಂದಾಯ ಇಲಾಖೆಗೆ ಸೇರ್ಪಡೆಗೊಂಡು ಪ್ರಸ್ತುತ ಕೊಂಬಾರು ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ರವಿವಾರ ಕಡಬದಲ್ಲಿ ಕುಸಿದು ಬಿದ್ದ‌ ಇವರನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಿದುಳು ರಕ್ತಸ್ರಾವದಿಂದಾಗಿ ಮೃತಪಟ್ಟರು ಎಂದು ವೈದ್ಯರು ತಿಳಿಸಿದ್ದಾರೆ.

ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News