ಗಾಂಜಾ ಮಾರಾಟ: ಆರೋಪಿ ಬಂಧನ
Update: 2018-07-08 21:58 IST
ಮಂಗಳೂರು, ಜು. 8: ಕಂಕನಾಡಿ ಮಾರ್ಕೆಟ್ ಬಳಿ ಕಾಮಗಾರಿ ಸ್ಥಗಿತಗೊಂಡಿರುವ ಕಟ್ಟಡದ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಕುಕ್ಕಾಜೆಬೈಲ್‌ನ ಆಸಿಫ್ (24) ನನ್ನು ಕದ್ರಿ ಪೊಲೀಸರು ಬಂಧಿಸಿ, 2ಸಾವಿರ ರೂ. ಬೆಲೆಯ 100 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ರವಿವಾರ ಬೆಳಗ್ಗೆ 11:30ಕ್ಕೆ ಕಾರ್ಯಾಚರಣೆ ನಡೆಸಿದರು. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯನ್ವಯ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.