ಮಂಗಳೂರು: ಟ್ಯೂಬ್ಲರ್ ಕೋನ್‌ಗಳ ಮೇಲೆ ಬಸ್ ಚಲಾಯಿಸಿದ ಚಾಲಕನ ಬಂಧನ
Update: 2018-07-08 22:01 IST
ಮಂಗಳೂರು, ಜು.8: ನಗರದ ಕರಂಗಲ್ಪಾಡಿ ಜಂಕ್ಷನ್ ಬಳಿ ಜೈಲ್‌ರೋಡ್‌ಗೆ ಹೋಗುವಲ್ಲಿ ಸುಗಮ ಸಂಚಾರಕ್ಕಾಗಿ ಅಳವಡಿಸಿದ್ದ ಟ್ಯೂಬ್ಲರ್ ಕೋನ್‌ಗಳ ಮೇಲೆ ಬಸ್ ಚಲಾಯಿಸಿ ಹಾನಿ ಎಸಗಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕ ಕಣ್ಣೂರಿನ ಶೀನು ಕೆ.ವೈ.(33) ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕ ಸೊತ್ತು ಹಾನಿಗೈದ ಆರೋಪದ ಮೇಲೆ ಈ ಕ್ರಮ ಜರಗಿಸಲಾಗಿದೆ. ಚಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಟ್ಯೂಬ್ಲರ್ ಕೋನ್‌ಗಳನ್ನು ಹಾಳು ಗೆಡಹಿದ ಬಗ್ಗೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರು ನೋಡಿದ್ದು, ಕೂಡಲೇ ಕ್ರಮ ಜರಗಿಸಲಾಗಿದೆ. ಸುಮಾರು ಹತ್ತು ದಿನಗಳ ಹಿಂದೆ ನಗರದ ಜ್ಯೋತಿ ವೃತ್ತದಲ್ಲಿ ಕೋನ್‌ಗಳಿಗೆ ಹಾನಿ ಎಸಗಿದ ಮೂರು ಕರ್ನಾಟಕ ಕೆಎಸ್ಸಾರ್ಟಿಸಿ ಮತ್ತು ಎರಡು ಖಾಸಗಿ ಬಸ್ ಚಾಲಕರ ವಿರುದ್ಧ ಇದೇ ರೀತಿ ಕ್ರಮ ಜರಗಿಸಲಾಗಿತ್ತು.