ಮಂಗಳೂರು: ವಿದ್ಯಾರ್ಥಿಗಳಿಗೆ ಉದ್ಯೋಗ, ವಿಕಾಸ ಕಾರ್ಯಾಗಾರ
ಮಂಗಳೂರು, ಜು.8: ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ 80ನೇ ವರ್ಷಾಚರಣೆಯ ಅಂಗವಾಗಿ 25 ಕಾಲೇಜುಗಳ ವಿದ್ಯಾರ್ಥಿಗಳಿಗೆ ನಗರದ ಸುಜೀರ ಸಿ.ವಿ.ನಾಯಕ್ ಸಭಾಂಗಣದಲ್ಲಿ ‘ಉದ್ಯೋಗ ಮತ್ತು ವಿಕಾಸ 2018’ ಕಾರ್ಯಾಗಾರದಲ್ಲಿ ರವಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಬ್ರಿಕ್ಸ್ ಇಂಡಿಯಾ ಕಂಪೆನಿ ಮುಖ್ಯ ಆಡಳಿತಗಾರ್ತಿ ಸಂಗೀತಾ ಕುಲಕರ್ಣಿ ಕ್ಷಿಪ್ರಗತಿಯಲ್ಲಿ ಆರ್ಥಿಕ ಸುಧಾರಣೆಯತ್ತ ಸಾಗುವ ಭಾರತದ ಯುವಪೀಳಿಗೆ ಉದ್ಯೋಗ ಹುಡುಕಿ ಹೋಗುವ ಬದಲು ತಮ್ಮದೇ ಆದ ಲಘು ಉದ್ಯಮಗಳನ್ನು ಸೃಷ್ಠಿಸಿ ತಾವೂ ಬೆಳೆಯಬೇಕು. ಇತರರನ್ನೂ ಬೆಳೆಸಬೇಕು ಎಂದು ಕರೆ ನೀಡಿದರು.
ದ.ಕ. ಜಿಲ್ಲಾ ಉದ್ಯಮ ಹಾಗೂ ಆರ್ಥಿಕ ವಿಭಾಗದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಉದ್ಯಮಗಳ ಬಗ್ಗೆ ಲತಾ ಕಿಣಿ, ಸಮರ್ಪಕ ಭಾಷೆ ಮತ್ತು ಸಂಪರ್ಕಗಳ ಬಗ್ಗೆ ರಜೀನಾ ದಿನೇಶ, ಕೌಶಲ್ಯಾಭಿವೃದ್ಧಿ ಬಗ್ಗೆ ಡಾ. ಅನಂತ ಜಿ. ಪ್ರಭು ಹಾಗೂ ಹೆಲ್ತ್ ಇದ್ದರೆ ವೆಲ್ತ್ ಎಂಬ ವಿಷಯದಲ್ಲಿ ಡಾ. ನರಸಿಂಹ ಪೈ ಮಾತನಾಡಿದರು.
ಲೆಕ್ಕಪರಿಶೋಧಕ ನಂದಗೋಪಾಲ ಶೆಣೈ, ಸಿಂಡಿಕೇಟ್ ಬ್ಯಾಂಕಿನ ಉಪ ಮಹಾ ಪ್ರಬಂಧಕ ಸಿ.ಎಂ.ತಿಮ್ಮಯ್ಯ, ಜಿಲ್ಲಾ ಲಘು ಉದ್ಯಮಗಳ ಸಂಘದ ಅಧ್ಯಕ್ಷ ಎಂ. ಅಣ್ಣಪ್ಪ ಪೈ, ಕಾರ್ಯದರ್ಶಿ ಡಾ.ಎ. ರಮೇಶ ಪೈ, ಖಚಾಂಚಿ ಜಿ.ವಿಶ್ವನಾಥ ಭಟ್ಟ, ಸುರೇಂದ್ರ ಆಚಾರ್ಯ, ಅರವಿಂದ ಆಚಾರ್ಯ, ಮಾಧವರಾಯ ಪ್ರಭು, ಎಂ.ಆರ್. ಕಾಮತ್, ಸುರೇಶ ಶೆಣೈಉಪಸ್ಥಿತರಿದ್ದರು.
ಜಿ.ಎಸ್.ಬಿ.ಸೇವಾಸಂಘದ ಅಧ್ಯಕ್ಷ ಪ್ರೊ.ಡಾ. ಕಸ್ತೂರಿ ಮೋಹನ ಪೈ ಸ್ವಾಗತಿಸಿದರು. ವಿಜಯಚಂದ್ರ ಕಾಮತ್ ವಂದಿಸಿದರು. ಕುಂಬ್ಳೆ ನರಸಿಂಹ ಪ್ರಭು ಕಾರ್ಯಕ್ರಮ ನಿರೂಪಿಸಿದರು.