×
Ad

‘ಸ್ವಚ್ಛ ಮಂಗಳೂರು ಅಭಿಯಾನ’ದಡಿ 39ನೇ ವಾರದ ಶ್ರಮದಾನ

Update: 2018-07-08 22:42 IST

ಮಂಗಳೂರು, ಜು.8: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 39ನೇ ಶ್ರಮದಾನವನ್ನು ಏರಪೋರ್ಟ್ ರಸ್ತೆ, ಬೋಂದೆಲ್‌ನಲ್ಲಿ ರವಿವಾರ ನಡೆಸಲಾಯಿತು.ನಿವೃತ್ತ ಪ್ರಾಧ್ಯಾಪಕ ಡಾ. ಹರೀಶ್ ಜೋಶಿ, ಟೆಕ್ಕಿ ಕಿಶನ್ ಶ್ರೀನಿವಾಸ ಅಮ್ಮಾಡಿ ಶ್ರಮದಾನಕ್ಕೆ ಚಾಲನೆ ನೀಡಿದರು.

ಬಾಲಕೃಷ್ಣ ರೈ, ಮಸಾ ಹಿರೊ, ಸತೀಶ್ ಟಿ.ಎಕ್ಕೂರು, ಹಿಮ್ಮತ್ ಸಿಂಗ್, ಸಂತೋಷ ಸುವರ್ಣ, ದೀಪಕ್ ಮೇಲಂಟ ಮತ್ತಿತರರು ಉಪಸ್ಥಿತರಿದ್ದರು.

ಅಭಿಯಾನದ ಪ್ರಧಾನ ಸಂಯೊಜಕ ದಿಲ್‌ರಾಜ್ ಆಳ್ವ ಮಾರ್ಗದರ್ಶನದಲ್ಲಿ ಬೇರೆ ಬೇರೆ ತಂಡಗಳಾಗಿ ಬೊಂದೇಲ್, ಏರ್‌ಪೋರ್ಟ್ ರಸ್ತೆಯಲ್ಲಿ ಸ್ವಚ್ಛತೆ ನಡೆಸಲಾಯಿತು. ಅಲ್ಲದೆ ಬೋಂದೆಲ್ ಬಳಿ ನಿರ್ಮಿಸಲಾದ ನೂತನ ಬಸ್ ತಂಗುದಾಣವನ್ನು ಲೋಕಾರ್ಪಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News