ಜನಪ್ರತಿನಿಧಿಗಳು ಎಲ್ಲಾ ಸಮುದಾಯದ ಜನರನ್ನು ಒಂದೇ ದೃಷ್ಠಿಯಿಂದ ನೋಡಬೇಕು: ಕೇಂದ್ರ ಸಚಿವ ಡಿ.ವಿ
ಪುತ್ತೂರು, ಜು. 8: ಜನಪ್ರತಿನಿಧಿಗಳು ತಮ್ಮ ಸಮಾಜದ ಜೊತೆಗೆ ಇತರ ಎಲ್ಲಾ ಸಮುದಾಯದ ಜನರನ್ನು ಒಂದೇ ದೃಷ್ಠಿಯಿಂದ ನೋಡಬೇಕಾಗಿದ್ದು, ರಾಜಕೀಯ ಒತ್ತಡಗಳಿಂದ ಅವರಿಂದ ನಡೆಯುವ ಸಣ್ಣ ಪುಟ್ಟ ವ್ಯತ್ಯಾಸಗಳಿಗೆ ಸಮುದಾಯದ ಬೆಂಬಲ ಅಗತ್ಯವಾಗಿದೆ. ಅವರು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ರವಿವಾರ ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಸಹ ಸಂಸ್ಥೆಗಳ ಸಹಯೋಗದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಪುತ್ತೂರಿನ ನೂತನ ಶಾಸಕ ಸಂಜೀವ ಮಠಂದೂರು ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ ಎಸ್.ಎಲ್.ಬೋಜೇ ಗೌಡರಿಗೆ ಸಾರ್ವಜನಿಕವಾಗಿ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ನೆರವೇರಿಸಿ ಮಾತನಾಡಿ ಶಾಸಕರಾದ ಸಂಜೀವ ಮಠಂದೂರು ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಬೋಜೇ ಗೌಡರಿಗೆ ಸಿಕ್ಕಿರುವ ಗೆಲುವು ಸಮುದಾಯಕ್ಕೆ ಸಿಕ್ಕಿದ ಗೌರವ. ಅದನ್ನು ಕಾಪಾಡಿಕೊಂಡು ಬರುವುದರೊಂದಿಗೆ ಅವರನ್ನು ಸರಿದಾರಿಯಲ್ಲಿ ನಡೆಸುವ ಜವಾಬ್ದಾರಿ ಸಮುದಾಯದ ಮೇಲಿದೆ ಎಂದರು.
ಶ್ರೀ ಆದಿಚುಂಚನಗಿರಿ ಮಠದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡುತ್ತಾ ದೈವ ಬಲ, ಗುರು ಬಲ ಇದ್ದಲ್ಲಿ ಏನು ಸಾಧಿಸಬಹುದು ಎಂಬುದಕ್ಕೆ ಇವತ್ತು ಬೋಜೇ ಗೌಡರು ಮತ್ತು ಸಂಜೀವ ಮಠಂದೂರು ಉದಾಹರಣೆಯಾಗಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಹ ತನ್ನದೆ ಆದ ಶಕ್ತಿ ಸಾಮರ್ಥ್ಯ, ನೈಜತೆ ಮೂಡಿರುತ್ತದೆ. ಅದನ್ನು ಯವಾಗ ಜನರ ಮಸ್ಸಿನಲ್ಲಿ ಕೊಂಡು ಹೋಗುತ್ತೇವೆಯೋ ಆಗ ಜನರು ಒಪ್ಪಿಕೊಳ್ಳುತ್ತಾರೆ ಮತ್ತು ಅಪಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಜನ ಸೇವೆಯೇ ಜನಾರ್ದನ ಸೇವೆ. ಇದನ್ನು ಜನ ಮತ್ತು ಜಗತ್ತು ಮೆಚ್ಚುವಂತಾಗಬೇಕು ಎಂದರು.
ದೇವರು ಪ್ರತ್ಯಕ್ಷನಾಗಿ ಬಂದು ಉದ್ದಾರ ಮಾಡಬೇಕೆಂದು ಹೇಳುವುದಿಲ್ಲ. ನೊಂದು ಬೆಂದವರನ್ನು ಸರಿ ಮಾಡಲೆಂದು ಭಗಂವಂತ ಕೆಲವು ಜನರಿಗೆ ಅಧಿಕಾರ ಕೊಡುತ್ತಾನೆ. ಅದನ್ನು ಪಡೆಯಯಲು ಯಾವುದೋ ಜನ್ಮದ ಪುಣ್ಯದ ಕಾರ್ಯದಿಂದ ಪಡೆದವರು ತನ್ನ ಅಧಿಕಾರವನ್ನು ದೇವರ ಪ್ರತಿನಿಧಿಯಾಗಿ ಸಮಾಜದ ಕೆಲಸ ಮಾಡಬೇಕೆಂದರು. ಮಾನವನಾಗಿ ಇರತಕ್ಕವನು ಸೃಷ್ಟಿಯ ರಹಸ್ಯವನ್ನು ಅರ್ಥೈಸಿ ಬದುಕಿ ಬಾಳಬೇಕಾಗುತ್ತದೆ ಎಂದರು.
ಅಭಿನಂದನಾ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಇವ ನಮ್ಮವ, ನಮ್ಮ ಮನೆಯ ಮಗ ಎಂದು ಸ್ವೀಕಾರ ಮಾಡಿದ ಕಾರಣ ಹಾಗೂ ನಿಮ್ಮ ಹೊಮ್ಮನಸ್ಸಿನಿಂದ ಜನರ ಸೇವೆ ಮಾಡಲು ಪ್ರೇರಣೆ ಕೊಟ್ಟಿದೆ. ಮಂಗಳೂರು, ವಿಟ್ಲ, ಬೆಳ್ತಂಗಡಿ, ಸುಳ್ಯದ ಗೌಡ ಸಮಾಜ ನಮ್ಮ ಸಮಾಜದ ಹುಡುಗ ಮುಂದೆ ಬರಬೇಕೆಂದು ಶ್ರಮಿಸಿದ್ದಾರೆ. ಇದಕ್ಕೆ ಸರಿಯಾಗಿ ಸಮಾಜದ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಗೌಡ ಸಮಾಜ ಸಾತ್ವಿಕ ಸಮಾಜ. ಇದು ನಾಯಕತ್ವಕ್ಕಾಗಿ ಪೈಪೋಟಿ ನೀಡಿದ ಸಮಾಜ ಅಲ್ಲ. ಸ್ವಾಭಿಮಾನದಿಂದ ಬದುಕಿದ ಸಮಾಜ. ಸಮಾಜದ ಡಿ.ವಿ.ಸದಾನಂದ ಗೌಡ, ಕೂಜುಗೋಡು ವೆಂಕಟ್ರಮಣ ಗೌಡ, ಸುಬ್ರಹ್ಮಣ್ಯ ಗೌಡರು ಇಲ್ಲಿ ಶಾಸಕರಾಗಿ ಹೋಗಿದ್ದಾರೆ. ಕುರುಂಜಿ ವೆಂಕಟ್ರಮಣ ಗೌಡರು ಶಿಕ್ಷಣ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ. ಅವರು ಕೇವಲ ಶಾಸಕರಾಗಿದ್ದಾಗಲೂ ಇಡಿ ಸಮಾಜಜಕ್ಕೆ ದುಡಿದಿದ್ದಾರೆ. ಅವರ ಕೆಲಸ ಕಾರ್ಯ ಇವತ್ತೂ ಕೂಡಾ ಸ್ಮರಣೆ ಮಾಡಬೇಕೆಂದ ಅವರು ಅವರ ಮಾರ್ಗದರ್ಶದಲ್ಲೇ ನಾನೂ ಕೂಡಾ ನಡೆಯಬೇಕೆಂಬ ತೀರ್ಮಾಣ ಮಾಡಿದ್ದೇನೆ ಎಂದರು.
ಶಾಸಕ ಸ್ಥಾನಕ್ಕೆ ನಾನೆಂದು ಲೋಬಿ ಮಾಡಿಲ್ಲ. ಸಾತ್ವಿಕ ಸಮಾಜದ ನಾಯಕನಿಗೆ ಸ್ಥಾನಮಾನ ಕೊಡಬೇಕೆಂಬ ದಿಶೆಯಲ್ಲಿ ನನ್ನನ್ನು ಗುರುತಿಸಿದ್ದಾರೆ ಎಂದು ಹೇಳಿದರು. ನೈರುಋತ್ಯ ಶಿಕ್ಷಕರ ಕ್ಷೇತ್ರದಿಂದ ವಿಜೇತರದ ಬೋಜೇ ಗೌಡ ಅವರು ಮಾತನಾಡಿ ಇವತ್ತು ಅಧಿಕಾರ ಶಾಶ್ವತ ಅಲ್ಲ. ಅಧಿಕಾರ ಅವಧಿಯಲ್ಲಿ ಮಾಡಿದ ಕೆಲಸ ಸಮಾಜದಲ್ಲಿ ಮುಖ್ಯ. ಈ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದ ಅವರು ಜನಾಂಗದ ಋಣ ತೀರಿಸಲು ಕೆಲಸ ಮಾಡಲೇ ಬೇಕು ಎಂದರು. ಇವತ್ತು ದೇವರ ಮತ್ತು ಗುರುಗಳ ಆಶೀರ್ವಾದದಿಂದ ನಮ್ಮ ಕುಮಾರ ಸ್ವಾಮೀಯವರು ಮುಖ್ಯಮಂತ್ರಿಗಳಾಗಿದ್ದಾರೆ. ಸಮಾಜದಲ್ಲಿ ನೊಂದವರ ಧ್ವನಿಯಾಗಲು ನೀವು ಸಹಕರಿಸಬೇಕು ಎಂದು ವಿನಂತಿಸಿದ್ದರು.
ನಾನು ಪಿಯುಸಿಯಲ್ಲಿ ಪೈಲ್ ಆಗಿ ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಸೇರ್ಪಡೆಗೊಂಡಿದ್ದೆ. ಇಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ಪರಿಣಾಮ ನಾನು ಮುಂದೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಕಾನೂನು ಶಿಕ್ಷಣ ಕಲಿತೆ. ಈ ನಿಟ್ಟಿನಲ್ಲಿ ನನ್ನ ಜೀವನದಲ್ಲಿ ಪುತ್ತೂರು ಪುನರ್‌ಜನ್ಮ ನೀಡಿದ ಊರು ಎಂದು ತನ್ನ ಬಾಲ್ಯದ ಅನುಭವವನ್ನು ಬೋಜೇ ಗೌಡರು ನೆನಪಿಸಿ ಕೊಂಡರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮಾತನಾಡಿ ಇವತ್ತು ಸಮಾಜದ ಬೆಂಬಲದಿಂದ ಶಾಸಕರಾಗಿ ಮುಂದೆ ಸಮಾಜವನ್ನು ಮುಂದೆ ಕೊಂಡೊಯ್ಯುವ ಶಕ್ತಿ ಶಾಸಕರಿಗೆ ಇರಬೇಕು ಎಂದ ಅವರು ನಮ್ಮ ಸಮಾಜ ಪೂರ್ಣ ಮಟ್ಟದಲ್ಲಿ ಗುರುತಿಸಿಕೊಳ್ಳುವ ಕೆಲಸ ಆಗಿಲ್ಲ. ವಿದ್ಯೆಗೆ ಆದ್ಯತೆ ಕೊಡಬೇಕು. ಸಮಾಜ ಒಗ್ಗಟ್ಟಾಗಲು ಈ ಹಿಂದೆ ಸ್ವಾಮೀಜಿಯವರಿಂದ ಸಾಧ್ಯವಾಗಿತ್ತು. ಅವರು ವಿದ್ಯೆಗೆ ಆದ್ಯತೆ ನೀಡಿದರು. ಅದೇ ರೀತಿ ಮುಂದೆ ನಮ್ಮ ಸಮಾಜದವರು ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಲ್ಪಡುವಂತೆ ಶಾಸಕರ ಪ್ರಯತ್ನ ಆಗಬೇಕು ಎಂದರು.
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷ ಮೋಹನ್ ಗೌಡ ಇಡ್ಯಡ್ಕ, ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಸಂಘದ ಮಾಜಿ ಅಧ್ಯಕ್ಷರುಗಳಾದ ಗಂಗಾಧರ ಗೌಡ ಕೆಮ್ಮಾರ, ಕೆ.ಆರ್ ಲಕ್ಷ್ಮಣ ಗೌಡ ಕುಂಟಿಕಾನ, ನ್ಯಾಂವಾದಿ ಚಂದ್ರಶೇಖರ್ ಮುಂಗ್ಲಿಮನೆ , ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಗೌಡ ನಂದಿಲ, ಮಹಿಳಾ ಗೌಡ ಸಂಘದ ಅಧ್ಯಕ್ಷ ಯಶೋದಾ, ಪ್ರಧಾನ ಕಾರ್ಯದರ್ಶಿ ಜಯಂತಿ ಆರ್.ಗೌಡ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಅಧ್ಯಕ್ಷ ಎ.ವಿ.ನಾರಾಯಣ, ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ.ಎಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮನೋಹರ್ ಕೆ.ವಿ ವಂದಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘದ ಸದಸ್ಯ ಉದಯ ಕುಮಾರ್, ಉಪನ್ಯಾಸಕ ಶ್ರೀಧರ್ ಗೌಡ ಮತ್ತು ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು.