×
Ad

ಮುರಿದು ಬಿದ್ದ ಬಡ್ಡಕಟ್ಟೆ ಕಿರು ಸೇತುವೆ: ಬಂಟ್ವಾಳ ಪುರಸಭೆಯಿಂದ ತಾತ್ಕಾಲಿಕ ಸೇತುವೆ ನಿರ್ಮಾಣ

Update: 2018-07-09 18:13 IST

ಬಂಟ್ವಾಳ, ಜು.9: ಕಳೆದ ಜೂನ್ 18ರಂದು ಸುರಿದ ಭಾರೀ ಮಳೆಗೆ ಮುರಿದು ಬಿದ್ದಿದ್ದ ಬಂಟ್ವಾಳ ಪುರಸಭಾ ವ್ಯಾಪ್ತಿಯ 5ನೆ ವಾರ್ಡ್‌ನ ಬಡ್ಡಕಟ್ಟೆ-ಹೊಸಮಾರು ಸಂಪರ್ಕಿಸುವ ಕಿರು ಸೇತುವೆಗೆ ಪರ್ಯಾಯವಾಗಿ ಬಂಟ್ವಾಳ ಪುರಸಭೆ ತಾತ್ಕಾಲಿಕ ಸೇತುವೆ ನಿರ್ಮಿಸಿದೆ.

55 ಸಾವಿರ ರೂ. ವೆಚ್ಚದಲ್ಲಿ 24 ಅಡಿ ಉದ್ದದ ಸೇತುವೆ ನಿರ್ಮಿಸಲಾಗಿದ್ದು, ತಾತ್ಕಾಲಿಕ ಕಿರು ಸೇತುವೆ ನಿರ್ಮಾಣದಿಂದ ಇದೇ ರಸ್ತೆಯನ್ನೇ ಅವಲಂಬಿಸಿದ್ದ ನೂರಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರಿಗೆ ಅನುಕೂಲವಾಗಿತ್ತು. ಸೋಮವಾರ ಈ ಕಿರುಸೇತುವೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಸ್ಥಳೀಯ ಪುರಸಭಾ ಸದಸ್ಯ ಪ್ರವೀಣ್ ಬಿ., ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ, ಸ್ಥಳೀಯರಾದ ಜನಾರ್ಧನ ಕುಲಾಲ್, ಸೋಮಪ್ಪ ಪೂಜಾರಿ, ಪದ್ಮನಾಭ ಸಾಲಿಯಾನ್, ಬೇಬಿ ಹೊಸ್ಮಾರು, ಲೋಲಾಕ್ಷಿ ಮೊದಲಾದವರು ಈ ಸಂದರ್ಭ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News