ನೋಯ್ಡಾ: ವಿಶ್ವದ ಅತೀ ದೊಡ್ಡ ಮೊಬೈಲ್ ಫ್ಯಾಕ್ಟರಿ ಉದ್ಘಾಟಿಸಿದ ಪ್ರಧಾನಿ ಮೋದಿ
Update: 2018-07-09 18:52 IST
ನೋಯ್ಡಾ, ಜು.9: ವಿಶ್ವದ ಅತೀ ದೊಡ್ಡ ಮೊಬೈಲ್ ಫ್ಯಾಕ್ಟರಿಯನ್ನು ದಿಲ್ಲಿ ಸಮೀಪದ ನೋಯ್ಡಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೇ ಉದ್ಘಾಟಿಸಿದರು.
ದಿಲ್ಲಿ ಮೆಟ್ರೋ ಮೂಲಕ ಈ ಇಬ್ಬರು ನಾಯಕರು ನೊಯ್ಡಾದಲ್ಲಿರುವ ಸ್ಯಾಮ್ ಸಂಗ್ ಫ್ಯಾಕ್ಟರಿಗೆ ತೆರಳಿದರು. ಒಂದು ವರ್ಷಕ್ಕೆ 12 ಕೋಟಿಯಷ್ಟು ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಸಾಮರ್ಥ್ಯವನ್ನು ಈ ನೂತನ ಸ್ಯಾಮ್ ಸಂಗ್ ಫ್ಯಾಕ್ಟರಿ ಹೊಂದಿದೆ.
ಜಗತ್ತಿನಲ್ಲಿ ಸ್ಮಾರ್ಟ್ ಫೋನ್ ತಯಾರಿಕೆಯಲ್ಲಿ ಕಳೆದ ವರ್ಷ ಭಾರತವು ಎರಡನೆ ಸ್ಥಾನದಲ್ಲಿದ್ದರೆ, ಚೀನಾ ಮೊದಲನೆ ಸ್ಥಾನದಲ್ಲಿತ್ತು.