×
Ad

ಮಂಗಳೂರು: ಕಲಾವಿದರಿಂದ ಅರ್ಜಿ ಆಹ್ವಾನ

Update: 2018-07-09 19:20 IST

ಮಂಗಳೂರು, ಜು.9: ನಿರಂತರವಾಗಿ ಕನ್ನಡ ಪರ, ಸಾತಿಹ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಸಂಘ-ಸಂಸ್ಥೆ ಹಮ್ಮಿಕೊಳ್ಳುವ ಕಾರ್ಯಕ್ರಮಕ್ಕೆ ಕಲಾ ತಂಡಗಳನ್ನು ಪ್ರಾಯೋಜಿಸಲು ಅವಕಾಶವಿದ್ದು, ಅದಕ್ಕಾಗಿ ಜಿಲ್ಲಾ ಮಟ್ಟದ ಕಲಾ ತಂಡಗಳ ಆಯ್ಕೆಗೆ ಅರ್ಜಿ ಅಹ್ವಾನಿಸಿದೆ.

ಜಿಲ್ಲಾ ಮಟ್ಟದಲ್ಲಿ ಕಲಾ ತಂಡಗಳನ್ನು ಪ್ರಾಯೋಜನೆ ಮಾಡುವಾಗ ಪಾರದರ್ಶಕತೆ ಹಾಗೂ ಕಲಾತಂಡಗಳಿಗೆ ಸಮಾನ ಅವಕಾಶ ನೀಡಲು (ಸಾಮಾನ್ಯ, ವಿಶೇಷ ಘಟಕ, ಗಿರಿಜನ ಉಪಯೋಜನೆಯಡಿ) ಸುಗಮ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ಹಿಂದುಸ್ಥಾನಿ ಸಂಗೀತ, ಹಿಂದುಸ್ಥಾನಿ ವಾದ್ಯ ಸಂಗೀತ, ಕರ್ನಾಟಕ ವಾದ್ಯ ಸಂಗೀತ ಶಾಸ್ತ್ರೀಯ ನೃತ್ಯ, ನೃತ್ಯ ರೂಪಕ, ಸಮೂಹ ನೃತ್ಯ, ಯಕ್ಷಗಾನ ತಾಳಮದ್ದಳೆ, ಹರಿಕಥೆ, ಗಮಕವಾಚನ, ರಂಗ ಗೀತೆಗಳು, ಯಕ್ಷಗಾನ ಪ್ರದರ್ಶನ, ನಾಟಕ ಪ್ರದರ್ಶನ, ಪೌರಾಣಿಕ ನಾಟಕ, ಗಮಕ, ಕಥಾ ಕೀರ್ತನೆ, ದಾಸರ ಪದಗಳು, ಗೊಂಬೆಯಾಟ ಹಾಗೂ ವಿವಿಧ ಜನಪದ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಆಕರ್ಷಕ ವೇಷಭೂಷಣಗಳೊಂದಿಗೆ ಮೆರವಣಿಗೆ ಹಾಗೂ ವೇದಿಕೆ ಕಲಾತಂಡಗಳು ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದ.ಕ.ಜಿಲ್ಲೆ ಅವರಿಂದ ಪಡೆದು ಜು.14ರೊಳಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ: 0824-2451527ನ್ನು ಸಂಪರ್ಕಿಸಬಹುದು ಎಂದು ಇಲಾಖಾ ಸಹಾಯಕ ನಿರ್ದೇಶಕ ರಾಜೇಶ್ ಜಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News