​ಮಂಗಳೂರು: ರಾಷ್ಟ್ರೀಯ ತುಳು ಯಕ್ಷಯಾನ ಸಮಿತಿ ಅಸ್ತಿತ್ವಕ್ಕೆ

Update: 2018-07-09 14:04 GMT

ಮಂಗಳೂರು, ಜು.9: ಮನುಷ್ಯನಾಗಿ ಹುಟ್ಟಿದ ಮೇಲೆ ದೇವಋಣ, ಪಿತೃ ಋಣ ಮತ್ತು ಸಮಾಜ ಋಣದಿಂದ ಮುಕ್ತರಾಗಬೇಕು. ದೇವರ ಮತ್ತು ಪಿತೃಗಳ ಸೇವೆ ಮತ್ತು ಆರಾಧನೆಯಿಂದ ಋಣಮುಕ್ತರಾದರೆ ತುಳುಭಾಷೆ ಮತ್ತು ಕಲಾಸೇವೆಯಿಂದ ಸಮಾಜದ ಋಣದಿಂದ ಮುಕ್ತರಾಗಬಹುದು ಎಂದು ಲಕ್ಷ್ಮಿನಾರಾಯಣ ಅಸ್ರಣ್ಣ ಹೇಳಿದರು.

ತುಳುನಾಡು ಯಕ್ಷಗಾನ ಫೌಂಡೇಶನ್ ಕುಡ್ಲ ವತಿಯಿಂದ ನಗರದ ತುಳುಭವನದಲ್ಲಿ ರವಿವಾರ ನಡೆದ ರಾಷ್ಟ್ರೀಯ ತುಳು ಯಕ್ಷಯಾನ ಸಮಿತಿ ರಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳಾದೇವಿ ಮೇಳದ ಸಂಚಾಲಕ ಎಸ್.ಎ. ವರ್ಕಾಡಿ, ತುಳು ಅಕಾಡಮಿಯ ಸದಸ್ಯ ಶಿವಾನಂದ ಕರ್ಕೇರ, ಅಖಿಲಾ ಭಾರತ ಲೋಕಕಲಾ ಪರಿಷತ್ತ್ ದೆಹಲಿಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ರಾಜೇಶ ಆಳ್ವ ಬದಿಯಡ್ಕಮ ರಾಷ್ಟ್ರೀಯ ತುಳು ಯಕ್ಷಯಾನ ಸಮಿತಿಯ ಕಾರ್ಯಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಲ್ಲಿ ಮಾತನಾಡಿದರು. ಸರಪಾಡಿ ಆಶೋಕ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು.

ದೀನೆಶ್ ರೈ ಕಡಬ ಸ್ವಾಗತಿಸಿದರು. ಸಂಜಯ ಕುಮಾರ್ ಶೆಟ್ಟಿ, ಗೋಣಿಬೀಡು ವಂದಿಸಿದರು.

ಸಮಿತಿ ರಚನೆ : ರಾಷ್ಟ್ರೀಯ ತುಳು ಯಕ್ಷಯಾನ ಕುಡ್ಲ ಇದರ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಒಡಿಯೂರು ಗುರುದೇವಾನಂದ ಸ್ವಾಮೀಜಿ, ಅಧ್ಯಕ್ಷರಾಗಿ ಕಟೀಲು ಶ್ರೀ ಲಕ್ಷ್ಮಿನಾರಾಯಣ ಅಸ್ರಣ್ಣ, ಕಾರ್ಯಾಧ್ಯಕ್ಷರಾಗಿ ಕುಕ್ಕುವಳ್ಳಿ ಭಾಸ್ಕರ ರೈ, ಉಪಾಧ್ಯಕ್ಷರಾಗಿ ಹರೀಶ್ ಕುಮಾರ್ ಶೆಟ್ಟಿ, ಎಸ್.ಎ. ವರ್ಕಾಡಿ, ಚಿದಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜಯ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪ್ರಸಾದ್ ಕೊಂಚಾಡಿ, ಮಧುಸೂದ ಅಲೆವೂರಾಯ, ಪ್ರಧಾನ ಸಂಚಾಲಕರಾಗಿ ಸರಪಾಡಿ ಅಶೋಕ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಡಾ. ರಾಜೇಶ್ ಆಳ್ವ ಬದಿಯಡ್ಕ, ಬಾಲಕೃಷ್ಣ ಶೆಟ್ಟಿ ಮಂಗಲ್ಪಾಡಿ, ಕೋಶಾಧಿಕಾರಿಯಾಗಿ ಕಡಬ ದಿನೇಶ್ ರೈ, ಸಹ ಸಂಚಾಲಕರಾಗಿ ಸಿ.ಕೆ. ಪ್ರಶಾಂತ್ ಪ್ರತಾಪ ಶೆಟ್ಟಿ, ಭೂಷಣ್ ಕುಲಾಲ್, ನಾಗರಾಜ್ ಕುದ್ರೋಳಿ, ದಿನೇಶ ಕೋಡಪದವು, ರಾಹುಲ್ ಶೆಟ್ಟಿ ಕುಡ್ಲ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಸಲಹಾ ಮಂಡಳಿ ಸದಸ್ಯರಾಗಿ ಎ.ಸಿ. ಭಂಡಾರಿ, ರಮಾನಾಥ ಹೆಗ್ಡೆ, ದಾಮೋದರ ನಿಸರ್ಗ, ಹರಿಕೃಷ್ಣ ಪುನರೂರು, ಕದ್ರಿ ನವನೀತ ಶೆಟ್ಟಿ, ಶಿವಾನಂದ ಕರ್ಕೇರ, ನಿಟ್ಟೆ ಶಶಿಧರ ಶೆಟ್ಟಿ, ನ್ಯಾಯವಾದಿ ಮೋಹನ್‌ದಾಸ್ ರೈ, ರಾಜಗೋಪಾಲ ರೈ, ಜಗದೀಶ ಶೆಟ್ಟಿ ಅರುವ, ವಿಕ್ರಂ ಭಟ್, ಎಂ.ಎಸ್. ಶೆಟ್ಟಿ ಸರಪಾಡಿ, ವಿಕ್ರಮ್ ಶೆಟ್ಟಿ ಸರಪಾಡಿ ಆಯ್ಕೆಗೊಂಡರು.ಕಾರ್ಯಕಾರಿ ಸಮಿತಿಗೆ 50 ಮಂದಿ ಸದಸ್ಯರನ್ನು ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News