‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ ಖ್ಯಾತಿಯ ಕವಿ ಕುಮಾರ್ ನಿಧನ
Update: 2018-07-09 20:24 IST
ಮುಂಬೈ,ಜು.9: ಕಳೆದ 10 ವರ್ಷಗಳಿಂದಲೂ ಸಬ್ ಟಿವಿ ಹಿಂದಿ ವಾಹಿನಿಯಲ್ಲಿ ನಿರಂತರವಾಗಿ ಪ್ರಸಾರಗೊಳ್ಳುತ್ತಿರುವ ಜನಪ್ರಿಯ ಧಾರಾವಾಹಿ ‘ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ’ದಲ್ಲಿ ಡಾ.ಹಂಸರಾಜ ಹಾಥಿ ಪಾತ್ರವನ್ನು ವಹಿಸುವ ಮೂಲಕ ಹೆಸರು ಮಾಡಿದ್ದ ಟಿವಿ ನಟ ಕವಿ ಕುಮಾರ್ ಆಝಾದ್ ಅವರು ಸೋಮವಾರ ಮಧ್ಯಾಹ್ನ ಇಲ್ಲಿ ತೀವ್ರ ಹೃದಯಸ್ತಂಭನದಿಂದಾಗಿ ನಿಧನರಾಗಿದ್ದಾರೆ.
ಅಸ್ವಸ್ಥಗೊಂಡಿದ್ದ ಆಝಾದ್ ಅವರನ್ನು ತಕ್ಷಣವೇ ವೊಕಾರ್ಟ್ ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ದಾರಿಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದರು.
ಅವರ ನಿಧನಕ್ಕೆ ಧಾರಾವಾಹಿ ನಿರ್ಮಾಪಕ ಆಸಿತ್ ಕುಮಾರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.