×
Ad

ಉಡುಪಿ: ಎಸ್‌ಐಒಯಿಂದ ವನಮಹೋತ್ಸವ ಆಚರಣೆ

Update: 2018-07-09 20:36 IST

ಉಡುಪಿ, ಜು. 9: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ ಉಡುಪಿ ಶಾಖೆಯ ವತಿಯಿಂದ ಉಡುಪಿ ನಗರದ ಸರಕಾರಿ ಪದವಿ ಪೂರ್ವ ಕಾಲೇಜು(ಬೋರ್ಡ್ ಹೈಸ್ಕೂಲ್), ನಾರ್ತ್ ಹೈಸ್ಕೂಲ್ ಮತ್ತು ಕುಕ್ಕಿಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ವನವುಹೋತ್ಸವವನ್ನು ಆಚರಿಸಲಾಯಿತು.

ಶಾಲೆಯ ಪ್ರಾಂಶುಪಾಲರು, ಮುಖ್ಯ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಸೇರಿ ಶಾಲೆಯ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎಸ್‌ಐಓ ಉಡುಪಿ ಶಾಖೆಯ ಅಧ್ಯಕ್ಷ ಫಾಝೀಲ್, ಸದಸ್ಯರಾದ ಅರ್ಬಾಝ್, ಯಹ್ಯಾ ಅಸಾದಿ, ಸ್ವಾಲಿಹ್ ಅಸಾದಿ, ಅರ್ಶದ್, ಮಹಮ್ಮದ್ ಶಾರೂಕ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News