ಮೋದಿಯ ಬುಲೆಟ್ ರೈಲಿಗೆ ಮತ್ತೊಂದು ವಿಘ್ನ

Update: 2018-07-09 16:18 GMT

ಮುಂಬೈ, ಜು. 9: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಯೋಜನೆಗೆ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಭೂಸ್ವಾಧೀನಕ್ಕೆ ಮಹಾರಾಷ್ಟ್ರ ಸರಕಾರದ ಅನುಮತಿ ದೊರಕಿದ ಬಳಿಕ ಈಗ ಮತ್ತೊಂದು ವಿಘ್ನ ಎದುರಾಗಿದೆ.

ಈ ಯೋಜನೆಗೆ ವಿಕ್ರೋಲಿ ಹಾಗೂ ಮುಂಬೈಯಲ್ಲಿ ಗೋದ್ರೆಜ್ ಸಮೂಹಕ್ಕೆ ಸೇರಿದ ಇನ್ನೊಂದು ಭೂಮಿಯನ್ನು ವಶಪಡಿಸಿಕೊಳ್ಳ ಬೇಕಿದೆ. ಬುಲೆಟ್ ರೈಲು ಸಂಚಾರದ ಒಟ್ಟು ಮಾರ್ಗ 508 ಕಿ.ಮೀ. ಇದರಲ್ಲಿ 21 ಕಿ.ಮೀ. ಭೂಮಿಯ ಅಡಿಯಲ್ಲಿ ಇರಲಿದೆ. ಭೂಮಿಯ ಅಡಿಯ ಸುರಂಗ ಪ್ರವೇಶಿಸುವಲ್ಲಿ ಇರುವ ತುಂಡು ಭೂಮಿ ಗೋದ್ರೆಜ್ ಸಮೂಹಕ್ಕೆ ಸೇರಿದ್ದು. ಈ ಭೂಮಿಯನ್ನು ವಾತಾಯನ ಕೊಳವೆಗೆ ಬಳಸಲು ಸರಕಾರ ನಿರ್ಧರಿಸಿದೆ. 2013ರ ಭೂಸ್ವಾಧೀನ ಕಾಯ್ದೆಯ ನಿಯಮದ ಪ್ರಕಾರ ಪ್ರಾಧಿಕಾರ ಹಳಿ ಜೋಡಣೆಯ ಯೋಜನೆಯನ್ನು ಬದಲಾಯಿಸಬೇಕು ಅಥವಾ ಗೋದ್ರೆಜ್‌ನಿಂದ ತುಂಡು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News