ಟರ್ಕಿ ರೈಲು ದುರಂತ: 24 ಮಂದಿ ಸಾವು, ನೂರಕ್ಕೂ ಅಧಿಕ ಜನರಿಗೆ ಗಾಯ
Update: 2018-07-09 22:30 IST
ಇಸ್ತಾನ್ಬುಲ್, ಜು.9: ಟರ್ಕಿಯಲ್ಲಿ ಸುರಿದ ತೀವ್ರ ಮಳೆಯ ಪರಿಣಾಮವಾಗಿ ಸಂಭವಿಸಿದ ಭೂಕುಸಿತದಿಂದ ವಾರಾಂತ್ಯದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲೊಂದು ಹಳಿ ತಪ್ಪಿದ ಪರಿಣಾಮ 24 ಮಂದಿ ಸಾವನ್ನಪ್ಪಿ ನೂರಕ್ಕೂ ಅಧಿಕ ಜನರು ಗಾಯಗೊಂಡ ಘಟನೆ ನಡೆದಿದೆ.
360 ಪ್ರಯಾಣಿಕರನ್ನು ಹೊಂದಿದ್ದ ರೈಲು ಗ್ರೀಕ್ ಮತ್ತು ಬಲ್ಗೇರಿಯ ಗಡಿಯಲ್ಲಿರುವ ಎಡಿರ್ನೆ ಪ್ರದೇಶದಿಂದ ಇಸ್ತಾನ್ಬುಲ್‌ನ ಹಲ್ಕಲಿ ನಿಲ್ದಾಣಕ್ಕೆ ತೆರಳುತ್ತಿದ್ದ ಸಂದರ್ಭ ತೆಕಿರ್ದಗ್ ಪ್ರದೇಶದಲ್ಲಿ ಭೂಕುಸಿತ ಉಂಟಾಗಿ ರೈಲಿನ ಆರು ಬೋಗಿಗಳು ಹಳಿತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೋಗಿಯಿಂದ ಜನರನ್ನು ರಕ್ಷಿಸುವ ಕಾರ್ಯ ಸೋಮವಾರ ಬೆಳಿಗ್ಗೆ ಅಂತ್ಯಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.