×
Ad

ಭಟ್ಕಳ: ಪಿ.ಎಚ್.ಡಿ ಪದವಿ ಪುರಸ್ಕೃತ ಸಂಧ್ಯ ಹೆಗಡೆಗೆ ಸನ್ಮಾನ

Update: 2018-07-09 22:35 IST

ಭಟ್ಕಳ, ಜು. 9: ತೋಟಗಾರಿಕಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಝಾರ್ಖಂಡ್ ನಲ್ಲಿ ತನ್ನ ಪಿ.ಎಚ್.ಡಿ. ಪದವಿಯನ್ನು ಪಡೆದ ಶಿರಾಲಿಯ ಸಂಧ್ಯಾ ಭಟ್ಟ ಅವರನ್ನು ಹವ್ಯಕ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗೌರವಿಸಲಾಯಿತು.

ಮುರ್ಡೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಧ್ಯಾ ಭಟ್ಟ ಅವರಿಗೆ ಶಾಲು ಹೊದಿಸಿ ಫಲ ಪುಷ್ಪವನ್ನು ನೀಡಿ ಅವರ ಸಾಧನೆಯನ್ನು ಶ್ಲಾಘಿಸಲಾಯಿತು. ಶಿರಾಲಿಯ ಜಿ.ಎಲ್.ಭಟ್ಟ ಮತ್ತು ಮುಕಾಂಬೆ ಭಟ್ಟ ಅವರು ಪುತ್ರಿಯಾದ ಈಕೆ ಪ್ರಸ್ತುತ ಅವರು ಭಟ್ಕಳದ ತೋಟಗಾರಿಕಾ ಇಲಾಖೆಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News