×
Ad

‘ದ ಇಂಗ್ಲಿಷ್ ಪೇಶಂಟ್’ ಕಾದಂಬರಿಗೆ ‘ಗೋಲ್ಡನ್ ಮ್ಯಾನ್ ಬೂಕರ್’ ಪ್ರಶಸ್ತಿ

Update: 2018-07-09 22:35 IST

ಲಂಡನ್, ಜು.9: ಮೈಕಲ್ ಒಂಡಾಜೆ (ಬ್ಲೂಮ್ಸ್‌ಬರಿ) ಬರೆದಿರುವ ‘ದ ಇಂಗ್ಲಿಷ್ ಪೇಶಂಟ್’ ಕಳೆದ ಐದು ದಶಕಗಳಲ್ಲಿ ಕಾಲ್ಪನಿಕ ವಿಭಾಗದಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ಪಡೆದಿರುವ ಅತ್ಯುತ್ತಮ ಕಾದಂಬರಿ ಎಂಬ ಹೆಗ್ಗಳಿಕೆಗೆ ಮಾತ್ರವಾಗಿದೆ.

ಲಂಡನ್‌ನ ಸೌತ್‌ಬ್ಯಾಂಕ್ ಸೆಂಟರ್‌ನಲ್ಲಿರುವ ರಾಯಲ್ ಫೆಸ್ಟಿವಲ್ ಹಾಲ್‌ನಲ್ಲಿ ರವಿವಾರ ನಡೆದ ಮ್ಯಾನ್ ಬೂಕರ್ 50 ಫೆಸ್ಟಿವಲ್ ಸಮಾರಂಭದಲ್ಲಿ ಗೋಲ್ಡನ್ ಮ್ಯಾನ್ ಬೂಕರ್ ಪ್ರಶಸ್ತಿ ವಿಜೇತರ ಹೆಸರನ್ನು ಘೋಷಣೆ ಮಾಡಲಾಯಿತು. ಮ್ಯಾನ್ ಬೂಕರ್ ಪ್ರಶಸ್ತಿಯ ಐವತ್ತನೇ ವರ್ಷಾಚರಣೆಯ ಸಮಾರಂಭದಲ್ಲಿ ನೀಡಲಾದ ಗೋಲ್ಡನ್ ಮ್ಯಾನ್ ಬೂಕರ್ ವಿಜೇತರನ್ನು ಸಾರ್ವಜನಿಕರು ಆಯ್ಕೆ ಮಾಡಿದ್ದಾರೆ. ಈವರೆಗೆ ಬೂಕರ್ ಪ್ರಶಸ್ತಿ ಪಡೆದಿರುವ ಎಲ್ಲ 51 ವಿಜೇತರ ಹೆಸರನ್ನು ಐವರು ವಿಶೇಷವಾಗಿ ನೇಮಕಗೊಂಡಿರುವ ತೀರ್ಪುಗಾರರು ಪರಿಶೀಲಿಸಿದರು. ಪ್ರತಿ ತೀರ್ಪುಗಾರರು ತಲಾ ಒಂದೊಂದು ದಶಕದಲ್ಲಿ ಪ್ರಶಸ್ತಿ ಪಡೆದಿರುವ ಪುಸ್ತಕಗಳನ್ನು ಓದುವಂತೆ ಸಲಹೆ ನೀಡಲಾಗಿತ್ತು. ನಂತರ ಇವರು ಹೆಸರಿಸಿದ ಪುಸ್ತಕಗಳ ಪಟ್ಟಿಯನ್ನು ಮ್ಯಾನ್ ಬೂಕರ್ ಜಾಲತಾಣದಲ್ಲಿ ಹಾಕಲಾಗಿತ್ತು ಮತ್ತು ಸಾರ್ವಜನಿಕರು ತಮ್ಮಿಷ್ಟದ ಪುಸ್ತಕಕ್ಕೆ ಮತ ಹಾಕಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು.

ಕವಿತೆ ಮತ್ತು ತಾತ್ವಿಕತೆಯನ್ನೊಳಗೊಂಡ ಕಾಲ್ಪನಿಕ ಕತೆಯನ್ನು ಹೊಂದಿರುವ ‘ದ ಇಂಗ್ಲಿಶ್ ಪೇಶಂಟ್’ ಗೋಲ್ಡನ್ ಮ್ಯಾನ್ ಬೂಕರ್ ಪ್ರಶಸ್ತಿಗೆ ಅರ್ಹ ಕಾದಂಬರಿಯಾಗಿದೆ ಎಂದು ಬೂಕರ್ ಪ್ರಶಸ್ತಿ ಪ್ರತಿಷ್ಠಾನದ ಬರೊನೆಸ್ ಹೆಲೆನ ಕೆನೆಡಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News