×
Ad

ಮಂಗಳೂರು: ಎಟಿಎಂ ನಂಬರ್ ಪಡೆದು 32 ಸಾವಿರ ರೂ. ವಂಚನೆ

Update: 2018-07-09 22:37 IST

ಮಂಗಳೂರು, ಜು.9: ಎಟಿಎಂ ಕಾರ್ಡ್‌ನ್ನು ವೆರಿಫೀಕೇಶನ್ ಮಾಡಲು ವ್ಯಕ್ತಿಯೋರ್ವ ಎಟಿಎಂ ನಂಬರ್ ಪಡೆದು 32 ಸಾವಿರ ರೂ. ವಂಚಿಸಿದ ಘಟನೆ ನಡೆದಿದೆ. ವಲೆರಿಯನ್ ಪಿಂಟೊ ವಂಚನೆಗೊಳಗಾದವರು.

ಜೂ.6ರಂದು ವ್ಯಕ್ತಿಯೋರ್ವ ಕರೆ ಮಾಡಿ ತನ್ನನ್ನು ಕೆನರಾ ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಎಟಿಎಂ ಕಾರ್ಡ್‌ನ್ನು ವೆರಿಫೀಕೇಶನ್ ಮಾಡುವುದಾಗಿ ತಿಳಿಸಿ ಎಟಿಎಂ ನಂಬರ್ ಪಡೆದುಕೊಂಡು ವಂಚಿಸಿದ್ದಾನೆ. 

ಆನಂತರ ಸುಮಾರು ಒಂದು ತಿಂಗಳ ನಂತರ ಪಿಂಟೊ ಮೊಬೈಲ್‌ಗೆ ಬ್ಯಾಂಕ್‌ನಿಂದ ‘ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇದೆ’ ಎಂದು ಸಂದೇಶವೊಂದು ಬಂದಿದೆ. ಅನುಮಾನಗೊಂಡು ಬ್ಯಾಂಕ್‌ಗೆ ತೆರಳಿ ವಿಚಾರಿಸಿದಾಗ ಜೂ.6ರಂದೇ ಖಾತೆಯಿಂದ 32 ಸಾವಿರ ರೂ. ವರ್ಗಾವಣೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News