ಬ್ರಹ್ಮಾವರ: ರೈಲು ಢಿಕ್ಕಿ ಹೊಡೆದು ಮೃತ್ಯು
Update: 2018-07-09 22:47 IST
ಬ್ರಹ್ಮಾವರ, ಜು.9: ರೈಲೊಂದು ಢಿಕ್ಕಿ ಹೊಡೆದ ಪರಿಣಾಮ ಮೂಗ ಹಾಗೂ ಕಿವುಡ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ನರ್ನಾಡು ಎಂಬಲ್ಲಿ ಜು.8ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ನರ್ನಾಡು ನಿವಾಸಿ ಚಂದ್ರಪ್ಪಮುಕ್ಕಣ್ಣ (60) ಎಂದು ಗುರುತಿಸಲಾಗಿದೆ. ಇವರು ಮೂತ್ರ ವಿಸರ್ಜನೆ ಮಾಡಲು ಗದ್ದೆಯ ಸಮೀಪದ ರೈಲ್ವೆ ಹಳಿ ಬಳಿ ನಡೆದು ಕೊಂಡು ಹೋಗುವಾಗ ಹಿಂದಿನಿಂದ ಬಂದ ರೈಲು ಢಿಕ್ಕಿ ಹೊಡೆಯಿತು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.