×
Ad

ಸೌದಿಯಲ್ಲಿ ಉಗ್ರರ ದಾಳಿ: ಬಾಂಗ್ಲಾದೇಶಿ ನಾಗರಿಕ, ಸೈನಿಕ ಸಾವು

Update: 2018-07-09 23:03 IST

ದುಬೈ, ಜು.9: ಸೌದಿ ಅರೇಬಿಯದ ಅಲ್ ಕಸ್ಸಿಮ್‌ನ ಬುರೈದ-ತರಫಿಯ ಚೆಕ್‌ಪೋಸ್ಟ್ ಮೇಲೆ ದಾಳಿ ರವಿವಾರ ಉಗ್ರರು ದಾಳಿ ನಡೆಸಿದ್ದು, ಸೌದಿ ಭದ್ರತಾ ಪಡೆ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದು ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರವಿವಾರ ಮಧ್ಯಾಹ್ನ ಸ್ಥಳೀಯ ಕಾಲಮಾನ 3.45ರ ಸುಮಾರಿಗೆ ಬುರೈದ-ತರಫಿಯ ಚೆಕ್‌ಪಾಯಿಂಟ್‌ಗೆ ಕಾರಿನಲ್ಲಿ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆ ಪ್ರತಿ ದಾಳಿ ನಡೆಸಿದ್ದು ಈ ವೇಳೆ ಇಬ್ಬರು ಉಗ್ರರು ಸಾವನ್ನಪ್ಪಿದ್ದರೆ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಗ್ರರ ಗುಂಡಿನ ದಾಳಿಯಲ್ಲಿ ಸರ್ಜೆಂಟ್ ಸುಲೈಮಾನ್ ಅಬ್ದುಲ್ ಅಝೀಝ್ ಅಲ್ ಅಬ್ದುಲ್ ಲತೀಫ್ ಹಾಗೂ ಓರ್ವ ಬಾಂಗ್ಲಾದೇಶಿ ನಾಗರಿಕ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News