×
Ad

ಜಿಎಸ್‌ಬಿ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2018-07-10 20:09 IST

ಉಡುಪಿ, ಜು.10: ಶ್ರೀಕಾಶಿ ಮಠ ಸಂಸ್ಥಾನ ವೆಲ್‌ಫೇರ್ ಫಂಡ್ ಉಡುಪಿ ಇವರ ವತಿಯಿಂದ ಜಿಎಸ್‌ಬಿ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಾಲರೂಪದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪಿಯುಸಿ ಹಾಗೂ ಡಿಗ್ರಿ, ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇನ್ನಿತರ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ಜಿಎಸ್‌ಬಿ ಸಮಾಜದ ವಿದ್ಯಾರ್ಥಿಗಳು ಅರ್ಜಿಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಯಾ ವ್ಯಾಪ್ತಿಯ ತಮ್ಮ ಊರಿನ ದೇವಸ್ಥಾನಗಳಲ್ಲಿ ವಿಚಾರಿಸಿ ಪಡೆದುಕೊಂಡು ಆ.15ರೊಳಗೆ ಶ್ರೀಕಾಶಿಮಠ ವೆಲ್‌ಫೇರ್ ಫಂಡ್, ಶ್ರೀಲಕ್ಷ್ಮೀವೆಂಕಟೇಶ ದೇವಸ್ಥಾನ, ವಿ.ಟಿ.ರೋಡ್, ಉಡುಪಿ ಇವರಿಗೆ ತಲುಪುವಂತೆ ಕಳುಹಿಸಿಕೊಡಬಹುದು.

ಹೆಚ್ಚಿನ ವಿವರಗಳಿಗೆ ದಿನೇಶ್ ಶೆಣೈ (ಮೊಬೈಲ್:9448984789) ಅಥವಾ ಎಂ.ಆರ್.ಪಡಿಯಾರ್ (9448501335) ಇವರನ್ನು ಸಂಪರ್ಕಿಸಬಹುದು. ಈಗಾಗಲೇ ಸಾಲರೂಪದ ವಿದ್ಯಾರ್ಥಿ ವೇತನ ಪಡೆದವರು ಮುಂದಿನ ವಿದ್ಯಾಭ್ಯಾಸಕ್ಕೆ ಪುನಹ ಅರ್ಜಿ ಸಲ್ಲಿಸಬಹುದು ಎಂದು ಕಾಶೀಮಠ ಸಂಸ್ಥಾನ ವೆಲ್ಫೇರ್ ಫಂಡ್‌ನ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News